[cmsmasters_row][cmsmasters_column data_width=”1/1″][cmsmasters_text]
ಬ್ರಹ್ಮಾವರ: ಇಲ್ಲಿನ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕನ ಅಧ್ಯಕ್ಷ ಇರ್ಮಾಡಿ ಕೆ. ತಿಮ್ಮಪ್ಪ ಹೆಗ್ಡೆ ̇(80) ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ನಿಧನ ಹೊಂದಿದರು.
35 ವರ್ಷಕ್ಕೂ ಅಧಿಕ ಕಾಲ ಬ್ಯಾಂಕ್ ನ ಅಧ್ಯಕ್ಷರಾಗಿ ಬ್ಯಾಂಕನ್ನು ಮುನ್ನಡೆಸಿಕೊಂಡು ಬಂದ ಹೆಗ್ಡೆಯವರು, ಐದು ಶಾಖೆಗಳ ಬ್ಯಾಂಕನ್ನು ಎಂಟು ಶಾಖೆಗಳಾಗಿ ಮೇಲ್ದರ್ಜೆಗೇರಿಸಿದರು. ರಾಜಕೀಯ, ಧಾರ್ಮಿಕ ಮುಂದಾಳುವಾಗಿ, ಚೇರ್ಕಾಡಿ ಶಾರದಾ ಹೈಸ್ಕೂಲ್ನ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾಗಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ದ.ಕ ಜಿಲ್ಲಾ ತೋಟಗಾರಿಕಾ ನಿರ್ದೇಶಕರಾಗಿ, ವಿವಿಧ ಸಂಘಟನೆಗಳಲ್ಲಿ ಮುಂಚೂಣಿಯಾಗಿ ತೊಡಗಿಸಿಕೊಂಡಿದ್ದರು.
ಮೃತರು ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
[/cmsmasters_text][/cmsmasters_column][/cmsmasters_row]