ಬೆಂಗಳೂರು: ಸ್ಯಾಂಡಲ್‌ವುಡ್ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಮ್ಮ ಮನೆಯ ಅಪಾರ್ಟಮೆಂಟ್‌ನಲ್ಲಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಹೊರವಲಯದಲ್ಲಿರುವ ಟಾಟಾ ನ್ಯೂ ಹೆವೆನ್ಯೂ ಅಪಾರ್ಟಮೆಂಟ್‌ನ ಮನೆ ಸಂಖ್ಯೆ 27011ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಾಸನೆ ಬಂದ ಹಿನ್ನೆಲೆ ಅಕ್ಕಪಕ್ಕದ ಮನೆಯವರಿಂದ ಪರಿಶೀಲನೆ ಬಳಿಕ ಪತ್ತೆಯಾಗಿದ್ದು, ಪೊಲೀಸರಿಂದ ಪರಿಶೀಲನೆ ನಡೆಯುತ್ತಿದೆ.
ಆರ್ಥಿಕ ಸಂಕಷ್ಟಗಳಿಂದ ಬೇಸತ್ತಿದ್ದ ಗುರುಪ್ರಸಾದ್, ಮೇಲೆ ಹಲವು ಚೆಕ್‌ಬೌನ್ಸ್ ಪ್ರಕರಣಗಳು ದಾಖಲಾಗಿದ್ದವು. ಈ ಎಲ್ಲಾ ಕಿರಿಕಿರಿಗಳಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದ.
1972ರಲ್ಲಿ ರಾಮನಗರದ ಕನಕಪುರದಲ್ಲಿ ಜನಿಸಿದ್ದ ಗುರುಪ್ರಸಾದ್ ಚೊಚ್ಚಲ ನಿರ್ದೇಶನದ ಮಠ ಚಿತ್ರದ ಮೂಲಕ ಪ್ರಖ್ಯಾತಿ ಪಡೆದಿದ್ದರು. ಬಳಿಕ ಎದ್ದೇಳು ಮಂಜುನಾಥ ಚಿತ್ರದ ಅತ್ಯುತ್ತಮ ಚಿತ್ರಕತೆಗೆ ರಾಜ್ಯಪ್ರಶಸ್ತಿ ಪಡೆದಿದ್ದರು.
ಇತ್ತಿಚಿಗೆ ಹಲವಾರು ಸಿನಿಮಾಗಳನ್ನು ಮಾಡಿ ಸೋತಿದ್ದ ಅವರು, ಕೌಟುಂಬಿಕ ವಿಚಾರದಲ್ಲೂ ಸಾಕಷ್ಟು ನೊಂದಿದ್ದರು ಎನ್ನಲಾಗಿದೆ.