ಕಟಪಾಡಿ: ನಿಂತಿದ್ದ ಲಾರಿಗೆ ಟೂರಿಸ್ಟ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಹಲವು ಗಂಭೀರ ಗಾಯಗೊಂಡ ಘಟನೆ ಉದ್ಯಾವರ ಪೆಟ್ರೋಲ್ ಬಂಕ್ ಬಳಿ ರಾ.ಹೆ. 66ರಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ.

ಕೊಲ್ಲೂರು ದೇವಸ್ಥಾನಕ್ಕೆಂದು ಹೊರಟಿದ್ದ ತಮಿಳುನಾಡು ಮೂಲದ ತಂಡ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ ಟೂರಿಸ್ಟ್ ವಾಹನ ಅರ್ಧದಷ್ಟು ಜಖಂಗೊಂಡಿದೆ. ಘಟನೆಯಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ನಿದ್ರೆ ಮಂಪರಿನಲ್ಲಿ ಘಟನೆ ಸಂಭವಿಸಿರುವ ಸಾಧ್ಯತೆ ಇದೆ ಎಂದು ಸ್ಥಳೀಯರ ಅಂದಾಜಿಸಿದ್ದಾರೆ.
ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.