• August 23, 2025
  • Last Update August 21, 2025 9:01 pm
  • Australia

Blog

Breaking News

ಬ್ರಹ್ಮಾವರ ತಾಲೂಕಿನ 7 ಮಂದಿಗೆ ರಾಜ್ಯೋತ್ಸವ ಜಿಲ್ಲಾಮಟ್ಟದ ಸನ್ಮಾನ

 ಬ್ರಹ್ಮಾವರ ತಾಲೂಕಿನ 7 ಮಂದಿ ಸಾಧಕರಿಗೆ 2024ನೇ ಸಾಲಿನ ಜಿಲ್ಲಾಮಟ್ಟದ ಸನ್ಮಾನಕ್ಕೆ ಆಯ್ಕೆಯಾಗಿದ್ದಾರೆ. ಸಮಾಜಸೇವೆಗೆ ಸಾಲಿಗ್ರಾಮಪಟ್ಟಣ ಪಂಚಾಯತ್‌ ವ್ಯಾಪ್ತಿಯ ಕೆ.ತಾರಾನಾಥ್‌ ಹೊಳ್ಳ, ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಮಣೂರು ಗ್ರಾಮದ ಶಂಕರ್‌ ಯು. ಮಂಜೇಶ್ವರ್‌, ಹಾವಂಜೆಯ ಪ್ರದೀಪ್‌ ಡಿಎಂ.  ಶಿಕ್ಷಣ ಕ್ಷೇತ್ರದ ಸೇವೆಗಾಗಿ, ಕೆಂಜೂರಿನ ಡಾ. ದಿನಕರ್‌ ಕೊರಗರ ಗುಂಪು, ಯಕ್ಷಗಾನದ ಸಾಧನೆಗಾಗಿ ಉದಯ್‌ಕುಮಾರ್‌ ಹೊಸಾಳ, ಸಾಲಿಗ್ರಾಮದ  ಪಿ.ವಿ ಆನಂದ್‌,  ಝೀಕನ್ನಡ ಡ್ರಾಮಾ ಜ್ಯೂನಿಯರ್‌ ಖ್ಯಾತಿಯ ಬಾಲಪ್ರತಿಬೆ ಸಮೃದ್ಧಿ ಎಸ್‌. ಮೊಗವೀರ ಅವರನ್ನು ಆಯ್ಕೆಮಾಡಲಾಗಿದೆ. ನ.೧ರಂದು ಉಡುಪಿಯಲ್ಲಿ ಮಹಾತ್ಮ […]

Read More
Breaking News

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ 2024ನೇ ಸಾಲಿನ ಜಿಲ್ಲಾಮಟ್ಟದ ಸನ್ಮಾನಕ್ಕೆ ಆಯ್ಕೆ

ಉಡುಪಿ: 25 ವರ್ಷಗಳನ್ನು ಪೂರೈಸಿ ರಜತ ಮಹೋತ್ಸವ ಸಂಭ್ರಮದಲ್ಲಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ರಾಜ್ಯೋತ್ಸವ ಪ್ರಯುಕ್ತ ನಡೆಯುವ 2024ನೇ ಸಾಲಿನ ಉಡುಪಿ ಜಿಲ್ಲಾಮಟ್ಟದ ಸನ್ಮಾನಕ್ಕೆ ಆಯ್ಕೆಯಾಗಿದೆ. ದ.ಕ. ಜಿಲ್ಲೆಯಿಂದ ಪ್ರತ್ಯೇಕಗೊಂಡು 1997ರಲ್ಲಿ ನೂತನ ಉಡುಪಿ ಜಿಲ್ಲೆ ರಚನೆಯಾದ ಹಿನ್ನೆಲೆಯಲ್ಲಿ ಉಡುಪಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು 1998ರಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವಾಗಿ ಸ್ಥಾಪನೆಗೊಂಡಿತು. ಹಿರಿಯ ಪತ್ರಕರ್ತ ದಿವಂಗತ ದಾಮೋದರ್ ಐತಾಳ್ ಸ್ಥಾಪಕಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಅಲ್ಲಿಂದ ಹಲವು ಹಿರಿಯ ಪತ್ರಕರ್ತರ ಅಧ್ಯಕ್ಷತೆಯಲ್ಲಿ ಸಂಘವು […]

Read More
Breaking News

ಚಿತ್ತೂರು ಪ್ರಭಾಕರ ಆಚಾರ್ಯರಿಗೆ ರಾಜ್ಯೋತ್ಸವ ಜಿಲ್ಲಾ ಮಟ್ಟದ ಸನ್ಮಾನ

ಉಡುಪಿ: ಪತ್ರಕರ್ತ, ಉಡುಪಿಮಿತ್ರ ಪತ್ರಿಕೆಯ ಸಂಪಾದಕ ಚಿತ್ತೂರು ಪ್ರಭಾಕರ ಆಚಾರ್ಯರಿಗೆ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆಯುವ ಜಿಲ್ಲಾಮಟ್ಟದ ಸನ್ಮಾನಕ್ಕೆ ಆಯ್ಜೆಯಾಗಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ‌ ಮೂರು ದಶಕಗಳ ಪ್ರಾಮಾಣಿಕ ಸೇವೆ ಸಲ್ಲಿಸಿ, 25 ವರ್ಷಗಳಿಂದ ಉಡುಪಿ ಮಿತ್ರ ಪತ್ರಿಕೆ ಸಂಪಾದಕರಾಗಿರುವ, ಬ್ರಹ್ಮಾವರ ವಲಯ ಪತ್ರಕರ್ತರ ಸಂಘ, ತಾಲೂಕು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸಂಘಟನೆಯನ್ನು ಗಟ್ಟಿಯಾಗಿ ಕಟ್ಟಿಬೆಳೆಸಿದ್ದಾರೆ. ಪ್ರಭಾಕರ ಆಚಾರ್ಯ ಅವರು ಬ್ರಹ್ಮಾವರ ಪತ್ರಕರ್ತರ ಸಂಘದ ಮೂಲಕ ಪ್ರತಿಷ್ಠಿತ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ […]

Read More
Health

ಮುಟ್ಟಿನ ಸಮಸ್ಯೆಗಳಿಗೆ ಆಯುರ್ವೇದದಲ್ಲಿದೆ ಶಾಶ್ವತ ಪರಿಹಾರ

ಇತ್ತಿಚಿನ ಮಹಿಳೆಯರು ಸಾಮಾನ್ಯವಾಗಿ ಎದುರಿಸುತ್ತಿರುವ ಸಮಸ್ಯೆಗಳೆಂದರೆ ಅದು ಮುಟ್ಟಿನ ಸಮಸ್ಯೆ. ಅನಿಯಮಿತ ಋತುಸ್ರಾವ, ಮುಟ್ಟಾಗದೇ ಇರುವುದು, ನಿರಂತರ ಹೊಟ್ಟೆ ಸೆಳೆತ, ಅತೀಯಾದ ರಕ್ತಸ್ರಾವ ಇವೆಲ್ಲವೂ ಇಂದು ಸಾಮಾನ್ಯವಾಗಿರುವ ಮುಟ್ಟಿನ ಸಮಸ್ಯೆಗಳು. ಆಧುನಿಕ ಸಮಾಜದಲ್ಲಿಯೂ ಇದಕ್ಕೆ ಸೂಕ್ತ ಪರಿಹಾರವಿರದ ಗೊಂದಲಮಯ ವಾತಾವರಣವಿದೆ ಮುಟ್ಟು ಎನ್ನುವುದು ಹೆಣ್ಣಿನ ಜೈವಿಕ ಪ್ರಕ್ರಿಯೆ. ಮಹತ್ವ ಪಡೆದ ವಿಚಾರ ಕೂಡ ಹೌದು. ಅದನ್ನು ಚರ್ಚಿಸಲು ಸಮಾಜದಲ್ಲಿ ಸಂಕೋಚವಿದೆ. ಈ ಸಂಕೋಚವೇ ಹಲವು ಸಮಸ್ಯೆಗಳಿಗೆ ಕಾರಣ ಕೂಡ ಹೌದು. ಮಾನಸಿಕ ವಿಪ್ಲವಗಳಿಗೆ ಕೂಡ ಕಾರಣವಾಗಿ ಕುಟುಂಬ […]

Read More
Breaking News

ಸಮುದ್ರದಲ್ಲಿ ದೋಣಿ ಮುಗುಚಿ ವ್ಯಕ್ತಿ ಸಾವು

ಬೀಜಾಡಿ: ಮಿನಿ ಕೈರಂಪಣಿ ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ದೋಣಿ ಮುಗುಚಿ ಸಾವನ್ನಪ್ಪಿದ ಘಟನೆ ಬೀಜಾಡಿಯ ಚಾತ್ರಬೆಟ್ಟುವಿನಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ. ಬೀಜಾಡಿ ನಿವಾಸಿ ಸಂಜೀವ ಮೃತಪಟ್ಟಿದ್ದು, ಬೆಳಗ್ಗೆ ಮಿನಿ ಕೈರಂಪಣಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಸಂದರ್ಭ, ನೀರಿನ ರಭಸಕ್ಕೆ ದೋಣಿ ಮುಗುಚಿ ಬಿದ್ದಿದೆ. ಈ ಸಂದರ್ಭ ಮುಳುಗಿದ ಸಂಜೀವ ಅವರನ್ನು ಅವರ ಜೊತೆಗಿದ್ದವರು ರಕ್ಷಿಸಿ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಅವರು ಅಷ್ಟರಲ್ಲೇ ಸಾವನ್ನಪ್ಪಿದ್ದರು. ಈ ಕುರಿತು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Read More
Breaking News

ಬಂಟ್ವಾಳ: ಅಪಘಾತದ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಬಂಟ್ವಾಳ: ಬಿ.ಸಿ.ರೋಡಿನ ತಲಪಾಡಿಯಲ್ಲಿ 20 ದಿನಗಳ ಹಿಂದೆ ನಡೆದ ಬೈಕ್‌ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದ ವ್ಯಕ್ತಿಯೊಬ್ಬರು ಮತ್ತೆ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಳ್ಳಿಗೆ ಗ್ರಾಮದ ಕಂಜತ್ತೂರು ನಿವಾಸಿ ಭೋಜ ಮೂಲ್ಯ (62) ಮೃತಪಟ್ಟವರು. ಸುಮಾರು 20 ದಿನಗಳ ಹಿಂದೆ ಅ.11ರಂದು ಸಂಜೆ 7ಗಂಟೆ ಸುಮಾರಿಗೆ ತಲಪಾಡಿಯಲ್ಲಿ ಹೆದ್ದಾರಿ ದಾಟುತ್ತಿದ್ದರು. ಈ ವೇಳೆ ಇವರಿಗೆ ಬೈಕ್‌ ಢಿಕ್ಕಿಯಾಗಿ ಕಾಲಿಗೆ ಗಾಯವಾಗಿತ್ತು. ತಕ್ಷಣ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. […]

Read More
Breaking News

ಶಿವನೇ ಸಮೀರ್‌ನಿಂದ ಕಾಪಾಡು: ಮಹಾಲಿಂಗೇಶ್ವರನ ಮೊರೆ ಹೋದ ಮಹಿಳೆ

ಪುತ್ತೂರು: ಅನ್ಯಕೋಮಿನ ಯುವಕನೋರ್ವನ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬರು ‘ಸಮೀರ್‌ನಿಂದ ನನ್ನನ್ನು ಕಾಪಾಡು’ ಪುತ್ತೂರು ಶ್ರೀಮಹಾಲಿಂಗೇಶ್ವರನ ಹುಂಡಿಗೆ ಚೀಟಿ ಹಾಕಿ ದೇವರ ಮೊರೆಹೋದ ಘಟನೆ ನಡೆದಿದೆ. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಹುಂಡಿಯ ಹಣ ಎಣಿಕೆ ಮಾಡಲಾಗುತ್ತದೆ. ಅದರಂತೆ ದೇವಳದ ಸಭಾಂಗಣದಲ್ಲಿ ಈ ಬಾರಿಯ ಕಾಣಿಕೆ ಹುಂಡಿಯ ಎಣಿಕೆ ನಡೆಯುತ್ತಿತ್ತು. ಈ ವೇಳೆ ಮಹಿಳೆ ದೇವರ ಮೊರೆಹೋದ ಚೀಟಿ ದೊರಕಿದೆ. ಪತ್ರದಲ್ಲಿ ನೊಂದ ಮಹಿಳೆಯು ಅನ್ಯಕೋಮಿನ ಯುವಕನಿಂದ ತನ್ನ ಜೀವನವೇ ಹಾಳಾಗಿದೆ ಎಂದು […]

Read More
Breaking News

ಸಂತೆಕಟ್ಟೆ: ನವೆಂಬರ್‌ 30ರೊಳಗೆ ಸರ್ವಿಸ್‌ ರಸ್ತೆಗಳು ಸಂಚಾರಕ್ಕೆ ಮುಕ್ತ

ಉಡುಪಿ: ಸಂತೆಕಟ್ಟೆಯಲ್ಲಿ ನಡೆಯುತ್ತಿರುವ ಓವರ್‌ಪಾಸ್‌ ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಕಾಮಗಾರಿಗೆ ವೇಗ ನೀಡಬೇಕೆಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು. ಬುಧವಾರ ರಜತಾದ್ರಿಯಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ  ಸಮಸ್ಯೆಗಳ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಸಂತೆಕಟ್ಟೆಯಲ್ಲಿ ಓವರ್‌ಪಾಸ್‌ ಕಾಮಗಾರಿಯಿಂದ ಸಂಪೂರ್ಣ ದೂಳಿನಿಂದ ತುಂಬಿದೆ. ಸಾಕಷ್ಟು ಸಮಸ್ಯೆಗಳು ಸಾರ್ವಜನಿಕರು ಎದುರಿಸುತ್ತಿದ್ದಾರೆ. ದೂಳಿಗೆ ಪರಿಹಾರ ಏನು ನೀಡುತ್ತಿರಿ ಎಂದು ಕೋಟ ಶ್ರೀನಿವಾಸ ಪೂಜಾರಿ ಕೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ನಗರಸಭೆ ನೀರಿನ ಟ್ಯಾಂಕರ್‌ ನೀಡಿದ್ದಲ್ಲಿ ನೀರು ಬಿಡುವ […]

Read More
Breaking News

ಟೋಲ್‌ಗೇಟ್‌ ವಿನಾಯಿತಿ ವಿಚಾರವನ್ನು ಮುಟ್ಟುವಂತಿಲ್ಲ : ಕೋಟ ಎಚ್ಚರಿಕೆ

ಉಡುಪಿ: ಸಾಸ್ತಾನ ಮತ್ತು ಹೆಜಮಾಡಿ ಟೋಲ್‌ಗಳಲ್ಲಿ ಸ್ಥಳೀಯರಿಗೆ ಇರುವ ವಿನಾಯಿತಿ ತೆರವುಗೊಳಿಸುವದಕ್ಕೆ ಸಾಧ್ಯವಿಲ್ಲ. ಯಥಾ ಸ್ಥಿತಿ ನಿರ್ವಹಣೆ ಮಾಡಿ ಎಂದು ಟೋಲ್‌ ಅಧಿಕಾರಿಗಳಿಗೆ ಸಂಸದ ಕಡಕ್‌ ಎಚ್ಚರಿಕೆ ನೀಡಿದರು. ಅವರು ಉಡುಪಿಯ ರಜತಾದ್ರಿಯಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗಳ ಕುರಿತ ಸಭೆಯಲ್ಲಿ ಪ್ರತಿ ನಿತ್ಯ ಟೋಲ್‌ನಲ್ಲಿ 2000 ಸ್ಥಳೀಯ ವಾಹನಗಳು ಓಡಾಡುತ್ತಿದೆ. ನಮಗೆ ಇಷ್ಟು ವಾಹನಗಳಿಗೆ ಉಚಿತವಾಗಿ ಬಿಡುವಂತಿಲ್ಲ .  ಸ್ಥಳೀಯರು ತಿಂಗಳ ಪಾಸ್‌ ಮಾಡಿಸಿಕೊಂಡು ಓಡಾಡಬೇಕು, ಇದಕ್ಕೆ ಅನುಮತಿ ನೀಡಬೇಕು ಎಂದು ಟೋಲ್‌ ಅಧಿಕಾರಿಗಳು ಸಂಸದರನ್ನು […]

Read More
Breaking News

ಶಾಲೆಯೊಳಗೆ ಏಕಾಏಕಿ ನುಗ್ಗಿದ ರಿಕ್ಷಾ: ವಿದ್ಯಾರ್ಥಿಗೆ ಗಾಯ

ಪಡುಬಿದ್ರಿ: ಆಟೋ ರಿಕ್ಷಾ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಅದಮಾರು ಪೂರ್ಣಪ್ರಜ್ಞಾ ಶಾಲಾ ಆಂಗ್ಲ ಮಾಧ್ಯಮ ವಿಭಾಗದ ಒಂದನೇ ತರಗತಿ ವಿದ್ಯಾರ್ಥಿಗೆ ರಿಕ್ಷಾ ಡಿಕ್ಕಿಹೊಡೆದ ಪರಿಣಾಮ ಎರಡೂ ಕಾಲಿಗೂ ಗಂಭೀರ ಗಾಯಗಳಾದ ಘಟನೆ ಶಾಲಾ ಆವರಣದಲ್ಲೇ ಸಂಭವಿಸಿದೆ. ಗಾಯಗೊಂಡ ಬಾಲಕ ಎರ್ಮಾಳು ಬರ್ಪಣಿ ಸಂತೋಷ್ ಶೆಟ್ಟಿಯವರ ಪುತ್ರ ಒಂದನೇ ತರಗತಿಯಲ್ಲಿ ಕಲಿಯುತ್ತಿರುವ ಭವಿನ್ ಶೆಟ್ಟಿ ಎಂದು ಗುರುತಿಸಲಾಗಿದೆ. ಶಾಲೆ ಬಿಟ್ಟ ಸಂದರ್ಭ ಮನೆಗೆ ಹೋಗಲು ಶಾಲಾ ಆವರಣದ ಒಳಗೆ ತಂದೆಯನ್ನು ಕಾಯುತ್ತಿರುವ ವೇಳೆ, ಅತೀ ವೇಗ ಹಾಗೂ ಅಜಾಗರೂಕತೆಯಿಂದ […]

Read More
error: Content is protected !!