• August 23, 2025
  • Last Update August 21, 2025 9:01 pm
  • Australia

Blog

Breaking News

ಕೃಷ್ಣಯ್ಯ ಜೋಗಿ ಅಂಕದಕಟ್ಟೆಯವರಿಗೆ ಗೌರವ ಡಾಕ್ಟರೇಟ್

ಕುಂದಾಪುರ: ಸಮಾಜ ಸೇವಕ, ಹಲವಾರು ಸಂಘ ಸಂಸ್ಥೆಗಳನ್ನು ಮುನ್ನಡೆಸಿರುವ ಕುಂದಾಪುರ ತಾಲೂಕು ಅಂಕದಕಟ್ಟೆಯ ಕೃಷ್ಣಯ್ಯ ಜೋಗಿ ಅವರಿಗೆ ಏಷ್ಯಾ ಇಂಟರ್‌ನ್ಯಾಷನಲ್ ರಿಸರ್ಚ್ ಯುನಿವರ್ಸಿಟಿ (ಐಏಒ)ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಏಷ್ಯಾ ಇಂಟರ್‌ನ್ಯಾಷನಲ್ ಕಲ್ಟರ್ ಅಕಾಡೆಮಿಯ ಸ್ಥಾಪಕರಾದ ವಿ ಬಾಬು ವಿಜಯನ್, ತಮಿಳುನಾಡಿನ ಐ.ಎನ್.ಟಿ.ಯು.ಸಿ ಯ ಡಾಕ್ಟರ್ ಕೆ.ಎ ಮನೋಕರನ್ (EX MLA ) ಆಂಧ್ರ ಪ್ರದೇಶದ ನಿವೃತ್ತ ನ್ಯಾಯಾಧೀಶ ಡಾಕ್ಟರ್ ಜೆ ಹರಿಡೋಸ್, ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ಡಾಕ್ಟರ್ ಸಿಎಲ್ ಶಿವಮೂರ್ತಿ, ಲಯನ್ಸ್ ಸಂಸ್ಥೆಯ ಕೆ.ವಿ ಬಾಲಕೃಷ್ಣ, […]

Read More
Breaking News

ಶಸ್ತ್ರಚಿಕಿತ್ಸೆ ವೇಳೆ ಹೃದಯಾಘಾತ- ಯುವಕ ಮೃತ್ಯು

ಕಡಬ: ಅನಾರೋಗ್ಯ ಪೀಡಿತ ಯುವಕ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳೂರು ನಗರದಲ್ಲಿ ಶನಿವಾರ ನಡೆದಿದೆ. ಕಡಬ ತಾಲೂಕಿನ ಕರ್ಮಾಯಿ ನಿವಾಸಿ ಜೈಸನ್ ಜಾರ್ಜ್ (29) ಮೃತಪಟ್ಟ ಯುವಕ. ಅನಾರೋಗ್ಯದಿಂದ ಬಳಲುತ್ತಿದ್ದ ಜೈಸನ್ ಜಾರ್ಜ್‌ನನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಅವರಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಿತ್ತು. ಈ ವೇಳೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತ ಜೈಸನ್ ತಂದೆ, ತಾಯಿ, ಸಹೋದರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Read More
Breaking News

ಮುಂದೊಂದು ದಿನ ಹಿಂದೂಗಳು ಸುನ್ನತ್ ಮಾಡಿಕೊಳ್ಳುವ ಸಂದರ್ಭ ಬರಬಹುದು: ಹರೀಶ್ ಪೂಂಜಾ

ಬೆಳ್ತಂಗಡಿ: ಮುಂದೊಂದು ದಿನ ಹಿಂದೂಗಳು ಸುನ್ನತ್ ಮಾಡಿಕೊಳ್ಳುವ ಸಂದರ್ಭ ಬರಬಹುದು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬೆಳ್ತಂಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ನಮ್ಮ ಕಡೆಯ ಉಸಿರು ಇರುವವರೆಗೂ ಹಿಂದುತ್ವವೇ ಬದುಕು ಎಂಬ ರೀತಿಯ ರಾಜಕಾರಣ ಮಾಡದಿದ್ದರೆ, ಮುಂದೊಂದು ದಿನ ನಾವು ಸುನ್ನತ್ ಮಾಡಿಕೊಳ್ಳಬೇಕಾದ ಸಂದರ್ಭ ಬರಬಹುದು. ಆದ್ದರಿಂದ ನಾವು ಹಿಂದುತ್ವವನ್ನು ಮೈಗೂಡಿಸಿಕೊಂಡು ಕೆಲಸ ಮಾಡಬೇಕು ಎಂದು ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  

Read More
Breaking News

ಕಡಬ: ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದಾಗಲೇ ಮರಬಿದ್ದು ಪಿಗ್ಮಿ ಕಲೆಕ್ಟರ್ ಮೃತ್ಯು

ಕಡಬ: ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದಾಗಲೇ ಮರವೊಂದು ಏಕಾಏಕಿ ಬಿದ್ದ ಪರಿಣಾಮ ಪಿಗ್ಮಿ ಕಲೆಕ್ಟರ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕೋಡಿಂಬಾಳ ಸಮೀಪದ ಪುಳಿಕುಕ್ಕುವಿನಲ್ಲಿ ನಡೆದಿದೆ. ಸೊಸೈಟಿಯ ಪಿಗ್ಮಿ ಕಲೆಕ್ಟರ್ ಸೀತಾರಾಮ ಮೃತಪಟ್ಟ ದುರ್ದೈವಿ. ಸೀತಾರಾಮ ಅವರು ಕಡಬದಿಂದ ಮನೆಗೆ ಬರುತ್ತಿರುವಾಗ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಸ್ಕೂಟರ್ ಸಹಿತ ಸೀತಾರಾಮರ ಮೇಲೆಯೇ ಮರ ಬುಡ ಸಹಿತ ಉರುಳಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತಕ್ಷಣ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮರವನ್ನು ಸರಿಸಿ […]

Read More
Breaking News

ಮಂಗಳೂರು: ಯೋಗೇಶ್ವರ್ ಪಕ್ಷಾಂತರಿ ಎಂಬುದು ಒಪ್ಪುತ್ತೇನೆ: ಡಿಕೆಶಿ

ಮಂಗಳೂರು: ಚೆನ್ನಪಟ್ಟಣ, ರಾಮನಗರಕ್ಕೆ ಏನೂ ಕೊಡದ ಕುಮಾರಸ್ವಾಮಿಯವರಿಗೆ ಅಳು ಬರುವುದೇ ಚುನಾವಣೆ ಸಂದರ್ಭ. ಕನ್ನಡ ಬಾವುಟ ಹಾರಿಸಲೆಂದು ರಾಮನಗರ, ಚೆನ್ನಪಟ್ಟಣದ ಜನತೆ ತಮ್ಮನ್ನು ಆಯ್ಕೆ ಮಾಡಿ ಕಳಿಸಿಕೊಟ್ಟಿದ್ದರು. ಆದರೆ ತಾವು ಒಂದು ದಿನವೂ ರಾಷ್ಟ್ರಧ್ವಜಕ್ಕೂ, ಕನ್ನಡ ಧ್ವಜಕ್ಕೂ ಗೌರವ ಕೊಟ್ಟಿಲ್ಲ. ಯಾವುದಾದರೂ ಒಂದು ಗುರುತಿಸುವ ಕೆಲಸ ಚನ್ನಪಟ್ಟಣಕ್ಕೆ ಮಾಡಿರೋದನ್ನು ಪ್ಲೀಸ್ ಪಾಯಿಂಟ್ ಔಟ್ ಮಾಡಿ. ಕೆರೆ ಮಾಡಿದ್ದು ಯೋಗೇಶ್, ದುಡ್ಡು ಕೊಟ್ಟಿದ್ದು ನಾನು.‌ ಚೀಫ್ ಮಿನಿಸ್ಟರ್ ಆಗಿದ್ದಾಗಲೇ ಮಾಡಿಲ್ಲ. ಎಂಎಲ್ಎ ಆಗಿದ್ದಾಗ ಬಿಜೆಪಿಯೊಂದಿಗೆ ಸಂಪರ್ಕವಿತ್ತು. ಆವಾಗಲಾದರೂ ಗುರುತಿಸುವ […]

Read More
Breaking News

Amazonಗೆ ಪಂಗನಾಮ ಹಾಕಿದ ಖತರ್ನಾಕ್‌ ಕಳ್ಳರಿವರು

ಮಂಗಳೂರು: ಆನಲೈನ್‌ ಮಾರುಕಟ್ಟೆಯ ದೈತ್ಯ ಅಮೆಜಾನ್‌ಗೆ 30ಕೋಟಿ ರೂ. ಪಂಗನಾಮ ಹಾಕಿದ ಖತರ್ನಾಕ್‌ ಕಳ್ಳರನ್ನು ಮಂಗಳೂರು ಉರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಧೋಪುರ್ ಜಿಲ್ಲೆಯ ನಿವಾಸಿ ರಾಜ್ ಕುಮಾರ್ ಮೀನಾ (23), ಕರೌಲಿ ಜಿಲ್ಲೆಯ ಸುಭಾಸ್ ಗುರ್ಜರ್ (27) ಬಂಧಿತ ಆರೋಪಿಗಳು. ಆರೋಪಿಗಳು ಕಳೆದ 4-5 ವರ್ಷಗಳಲ್ಲಿ ಅಮೆಜಾನ್ ಕಂಪನಿಯ ನಿಯಮಗಳನ್ನೇ ಬಂಡವಾಳ ಮಾಡಿಕೊಂಡು ವಂಚಿಸಿದ್ದಾರೆ. ಅಮೆಜಾನ್ ಕಂಪನಿಯ ಆನ್ಲೈನ್ ಮೂಲಕ ವಿವಿಧ ರೀತಿಯ ಬೆಲೆಬಾಳುವ ಸಾಮಗ್ರಿಗಳನ್ನು ಖರೀದಿಸಿ ವಂಚಿಸುತ್ತಿದ್ದರು. ಇವರು ಅಮೆಜಾನ್‌ನಿಂದಬರೋಬ್ಬರಿ 30 ಕೋಟಿ […]

Read More
Breaking News

ಉಪಚುನಾವಣೆ ಹಿನ್ನೆಲೆ: ಟ್ರಬಲ್‌ಶೂಟರ್‌ ಕೊಲ್ಲೂರಿಗೆ

ಉಡುಪಿ: ಕಾಂಗ್ರೆಸ್‌ನ ಟ್ರಬಲ್‌ಶೂಟರ್‌ ಎಂದೇ ಖ್ಯಾತಿ ಪಡೆದಿರುವ ಡಿಕೆಶಿ ಇಂದು (ನ.2) ಕೊಲ್ಲೂರಿಗೆ ಭೇಟಿ ನೀಡಲಿದ್ದಾರೆ. ಚೆನ್ನಪಟ್ಟಣ್ಣ ಸಂಡೂರು ಉಪಚುನಾವಣೆ ಹಿನ್ನೆಲೆ, ತಾಯಿ ಮೂಕಾಂಬಿಕೆಯ ದರ್ಶನ ಪಡೆದು ಚುನಾವಣಾ ಗೆಲುವಿಗೆ ಪ್ರಾರ್ಥನೆ ಸಲ್ಲಿಸಲು ಆಗಮಿಸಲಿರುವ ಡಿಕೆಶಿ, ತಾಯಿ ಮೂಕಾಂಬಿಕೆ ಸನ್ನಿಧಿಯಲ್ಲಿ ವಿಶೇಷ ಸಂಕಲ್ಪ ಮಾಡಲಿದ್ದಾರೆ. ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಬಗ್ಗೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿರುವ ಡಿಕೆಶಿ, ಪ್ರತಿ ವಿಶೇಷ ಸಂದರ್ಭಗಳಲ್ಲಿ ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ಸರಕಾರ ರಚನೆ ವೇಳೆ […]

Read More
Breaking News

ಕುಂದಾಪುರ: ಅಕ್ರಮ ಗಾಂಜಾ ದಾಸ್ತಾನು: ಮಹಿಳೆ ಸಹಿತ ಇಬ್ಬರ ಬಂಧನ

ಅಕ್ರಮವಾಗಿ ಗಾಂಜಾ ದಾಸ್ತಾನು ಇಟ್ಟುಕೊಂಡಿದ್ದ ಹಿನ್ನೆಲೆ ದಾಳಿ ನಡೆಸಿದ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು 6.43 ಲಕ್ಷ ರೂ. ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಕುಂದಾಪುರ ತಾಲೂಕಿನ ಗುಲ್ವಾಡಿ ಉದಯನಗರ ನಿವಾಸಿ ನಜರುಲ್ಲಾ ಖಾನ್‌(40 ಮತ್ತು ಫಾತಿಮಾ (33)ರನ್ನು ಬಂಧಿಸಲಾಗಿದ್ದು, ಇವರಲ್ಲಿ 8ಕೆಜಿ. 374 ಗ್ರಾಂ ತೂಕದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More
Breaking News

ಮಂಗಳೂರು: ಬಾಡಿಗೆ ಮನೆಯಲ್ಲಿ ಗಾಂಜಾ ಮಾರಾಟ ದಂಧೆ: 8ಕೆಜಿ ಗಾಂಜಾದೊಂದಿಗೆ ಮಹಿಳೆ ಸೇರಿ ಇಬ್ಬರು ಅರೆಸ್ಟ್

ಮಂಗಳೂರು: ನಗರದ ಹೊರವಲಯದ ಉಳ್ಳಾಲದ ಕಿನ್ಯಾ ಬಾಕಿಮಾರು ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ಗಾಂಜಾ ಮಾರಾಟ ದಂಧೆ ನಡೆಸುತ್ತಿದ್ದ ಮಹಿಳೆ ಹಾಗೂ ಓರ್ವ ಪುರುಷನನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆರೋಪಿಗಳಿಂದ 8 ಕೆಜಿಯಷ್ಟು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಉಳ್ಳಾಲದ ಕಿನ್ಯಾ, ಬಾಳೆಕಜೆ, ಬಾಕಿಮಾರು ನಿವಾಸಿಗಳಾದ ಶೇಕ್ ನಝೀರ್ ಹುಸೈನ್(50), ಅಪ್ಸಾತ್(37) ಬಂಧಿತ ಆರೋಪಿಗಳು. ಉಳ್ಳಾಲ ಠಾಣಾ ವ್ಯಾಪ್ತಿಯ ಕಿನ್ಯಾ, ರೆಹಮತ್ ನಗರ ಕಜಿ ಬಾಕಿಮಾರು, ಎಂಬಲ್ಲಿ ಬಾಡಿಗೆ ಮನೆಯಲ್ಲಿಯೇ ಇವರಿಬ್ಬರು ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ದೊರತ […]

Read More
Breaking News

ಮಂಗಳೂರು: ಸಮಾಜ ಸೇವಕ ಬಾಬು ಪಿಲಾರ್‌ಗೆ ಸುವರ್ಣ ಮಹೋತ್ಸವ ಪ್ರಶಸ್ತಿ ಘೋಷಿಸಿ ಕೊನೆಕ್ಷಣಕ್ಕೆ ಇಲ್ಲ ಎಂದು ಕೈತೊಳೆದುಕೊಂಡ ಸರಕಾರ

ಮಂಗಳೂರು: ಸಾವಿರಾರು ಅನಾಥ, ಬಡ, ನಿರ್ಗತಿಕರ ಮೃತದೇಹವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಅಂತ್ಯ ಸಂಸ್ಕಾರ ಮಾಡಿದ್ದ ಸಮಾಜ ಸೇವಕ ದ.ಕ.ಜಿಲ್ಲೆಯ ಉಳ್ಳಾಲ ತಾಲೂಕಿನ ಬಾಬು ಪಿಲಾ‌ರ್ ಸುವರ್ಣ ಮಹೋತ್ಸವ ಪ್ರಶಸ್ತಿ ಘೋಷಿಸಲಾಗಿತ್ತು. ಆದರೆ ಅವರು ಪ್ರಶಸ್ತಿ ಪಡೆಯಲು ಬೆಂಗಳೂರಿಗೆ ಹೋದಾಗ ತಮಗೆ ಪ್ರಶಸ್ತಿಯಿಲ್ಲ ಕ್ಷಮಿಸಿ ಮುಂದಿನ ಸಲ ಪರಿಗಣಿಸುತ್ತೇವೆಂದು ಸರಕಾರ ಕೈತೊಳೆದುಕೊಂಡಿದೆ. ಈ ಪ್ರಶಸ್ತಿ ವಂಚನೆಗೆ ಆಯ್ಕೆ ಸಮಿತಿಯ ಎಡವಟ್ಟೇ ಕಾರಣ. ಇದು ಹಿರಿಯ ಸಮಾಜ ಸೇವಕನಿಗೆ ಮಾಡಿರುವ ಅವಮಾನ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕನ್ನಡ […]

Read More
error: Content is protected !!