ಬಾರ್ಕೂರು: ತುಳುನಾಡ ರಾಜಧಾನಿ ಬಾರ್ಕೂರು, ಐತಿಹಾಸಿಕವಾಗಿ ಗುರುತಿಸಿಕೊಂಡಿರುವ ಸ್ಥಳ ಕೂಡ ಹೌದು. ಪ್ರವಾಸೋಧ್ಯಮಕ್ಕೆ ಉತ್ತಮ ಅವಕಾಶವಿರುವ ಬಾರ್ಕೂರಿನಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿಗೆ ಜಡ ಆಡಳಿತ ವ್ಯವಸ್ಥೆ ಮುಂದೆ ಬರುತ್ತಿಲ್ಲ. ಅಭಿವೃದ್ಧಿಯೇ ಮರಿಚಿಕೆಯಾಗಿರುವ ಬಾರ್ಕೂರಿನಲ್ಲಿ ಸ್ವಚ್ಛತೆ ಕೂಡ ಮರಿಚಿಕೆಯೇ ಎನ್ನುವಂತಾಗಿದೆ.
ಮೇಲೆ ಕಾಣುತ್ತಿರುವ ಚಿತ್ರದಲ್ಲಿರುವ ಕಸದ ರಾಶಿ, ಬಾರ್ಕೂರಿನ ಹೆಬ್ಬಾಗಿಲು ಹೊಸಕೆರೆ ಮಹಾಗಣಪತಿ ದೇವಸ್ಥಾನದ ಮುಂಭಾಗದಲ್ಲಿರುವಂಹದ್ದು. ಕಾಣುವುದಕ್ಕೆ ಅಸಹ್ಯ ಕಂಡರು, ಗ್ರಾಮಪಂಚಾಯತ್‌ಗೆ ಮಾತ್ರ ಇದು ಸಹ್ಯ. ಏಕೆಂದರೆ ಬಾರ್ಕೂರು ಪಂಚಾಯತ್‌ಗೆ ಇದರ ಬಗ್ಗೆ ಯಾವುದೇ ತಲೆಬಿಸಿ ಇಲ್ಲ.
ನಾಳೆ ದಿನ ಪಂಚಾಯತ್ ಮುಂದೆಯೇ ಕಸದ ರಾಶಿ ಬಿದ್ದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದಷ್ಟು ಜಡ್ಡುಗಟ್ಟಿದ ವ್ಯವಸ್ಥೆಯಾಗಿದೆ ಎಂದು ಸಾರ್ವಜನಿಕರು ಲೇವಡಿ ಮಾಡುತ್ತಿದ್ದಾರೆ. ಪಂಚಾಯತ್ ವ್ಯವಸ್ಥೆ ಬಗ್ಗೆ ಪಂಚಾಯತ್ ಸದಸ್ಯರೇ ದೂರು ನೀಡಿದರೂ ಗಮನಹರಿಸದಷ್ಟು ಜಡ್ಡುಗಟ್ಟಿದೆ.
ಇಲ್ಲಿ ಕಸದ ರಾಶಿ ಸಮಸ್ಯೆ ಬಗ್ಗೆ ಹಲವು ಬಾರಿ ಮಾದ್ಯಮಗಳಲ್ಲಿ ಬಂದರೂ ಕೂಡ ಪಂಚಾಯತ್ ತಲೆಕೆಡಿಸಿಕೊಂಡಿಲ್ಲ. ಇಲ್ಲಿನ ಕಸದ ರಾಶಿಯನ್ನು ಕಂಡು ಬೇಸರಗೊಂಡ ಕೆಲ ಸಾರ್ವಜನಿಕರು ಈ ಪ್ಲಾಸ್ಟಿಕ್ ರಾಶಿಗೆ ಹಲವು ಬಾರಿ ಬೆಂಕಿ ಹಾಕಿದ್ದಾರೆ. ಆದರೆ ಕಾನೂನು ಪ್ರಕಾರ ಪ್ಲಾಸ್ಟಿಕ್‌ಗೆ ಬೆಂಕಿ ಹಾಕುವುದು ಶಿಕ್ಷಾರ್ಹ ಅಪರಾಧ.
ಬಾರ್ಕೂರು ಪಂಚಾಯತ್ ಇನ್ನಾದರೂ ಈ ಸಮಸ್ಯೆಗಳ ಬಗ್ಗೆ ಗಮನಹರಿಸಿ ಪ್ಲಾಸ್ಟಿಕ್ ಸಮಸ್ಯೆಗಳಿಗೆ ಮುಕ್ತಿ ಕಾಣಿಸಬೇಕು. ತುಳುನಾಡ ರಾಜಧಾನಿ ಕಸಗಳ ರಾಜಧಾನಿಯಾಗದೇ ಸ್ವಚ್ಛತೆಯಿಂದ ನಳನಳಿಸಬೇಕು ಎನ್ನುವುದು ಸಾರ್ವಜನಿಕರ ಆಶಯ.