ಉಡುಪಿ: ಇಲ್ಲಿನ ಶ್ರೀ ಕೃಷ್ಣಮಠದ ಕನಕಗೋಪುರದ ಮುಂಭಾಗ ಯುವತಿಯೊಬ್ಬಳು ಕುಸಿದು ಬಿದ್ದ ಘಟನೆ ಮಂಗಳವಾರ ಸಂಭವಿಸಿದೆ.
ಅಸಹಾಯಕ ಪರಿಸ್ಥಿತಿಯಲ್ಲಿದ್ದ ಆಕೆಯನ್ನು ಪ್ರಾಥಮಿಕ ಚಿಕಿತ್ಸೆ ನೀಡಿ, ಸಮಾಜಸೇವಕ ನಿತ್ಯಾನಂದ ಒಳಕಾಡು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದರು.
ಬಳಿಕ ವಿಚಾರಣೆ ನಡೆಸಿದ ಸಂದರ್ಭ ಆಕೆ ಉಡುಪಿಯ ಗುಜ್ಜರಬೆಟ್ಟು ನಿವಾಸಿ ಎಂದು ತಿಳಿದು ಬಂದಿದೆ.