ಬಾಂಗ್ಲಾ‌ ಪದಚ್ಯುತ ಪ್ರಧಾನಿ ಹಸೀನಾಗೆ 10 ವರ್ಷ ಜೈಲು

February 3, 2026 8:53 AM

ಡಾಕಾ,ಫೆಬ್ರವರಿ 3:
ಭ್ರಷ್ಟಾಚಾರದ ಆರೋಪದ ಮೇಲೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಢಾಕಾದ ವಿಶೇಷ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಸೋಮವಾರ ಹೊರಬಿದ್ದ ಈ ತೀರ್ಪು ದೇಶದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಪ್ರಕರಣದ ಹಿನ್ನೆಲೆ: ರಾಜಧಾನಿ ಢಾಕಾದ ಸಮೀಪವಿರುವ ‘ಪೂರ್ವಾಚಲ ನವನಗರ’ (Purbachal New Town) ವಸತಿ ಯೋಜನೆಯಡಿ ಸರ್ಕಾರಿ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪ ಅವರ ಮೇಲಿತ್ತು. ಈ ಪ್ರಕರಣಗಳ ಖುಲಂಖುಷ ತನಿಖೆ ಮಾಡಿದ ನ್ಯಾಯಾಲಯ ಎರಡು ಪ್ರತ್ಯೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ತಲಾ 5 ವರ್ಷಗಳಂತೆ ಒಟ್ಟು 10 ವರ್ಷಗಳ ಕಠಿಣ ಕಾರಾಗೃಹ ವಾಸ ಮತ್ತು ದಂಡವನ್ನು ವಿಧಿಸಲಾಗಿದೆ.

ಹಸೀನಾ ಅವರ ಜೊತೆಗೆ ಅವರ ಮಗ ಸಜೀಬ್ ವಾಜೆದ್ ಜಾಯ್, ಮೊಮ್ಮಕ್ಕಳು ಮತ್ತು ಇತರ ನಿಕಟವರ್ತಿಗಳಿಗೂ ವಿವಿಧ ಅವಧಿಯ ಜೈಲು ಶಿಕ್ಷೆ ವಿಧಿಸಲಾಗಿದೆ.

2024ರ ಆಗಸ್ಟ್‌ನಲ್ಲಿ ನಡೆದ ಜನಾಗ್ರಹದ ನಂತರ ಭಾರತದಲ್ಲಿ ಆಶ್ರಯ ಪಡೆದಿರುವ ಹಸೀನಾ ಅವರ ಅನುಪಸ್ಥಿತಿಯಲ್ಲೇ (Trial in absentia) ಈ ವಿಚಾರಣೆ ನಡೆದಿದೆ. ಬಾಂಗ್ಲಾದೇಶದಲ್ಲಿ ಫೆಬ್ರವರಿ 12, 2026 ರಂದು ಸಾರ್ವತ್ರಿಕ ಚುನಾವಣೆಗಳು ನಡೆಯಲಿದ್ದು, ಅದಕ್ಕೂ ಕೆಲವೇ ದಿನಗಳ ಮೊದಲು ಈ ತೀರ್ಪು ಬಂದಿರುವುದು ಮಹತ್ವ ಪಡೆದಿದೆ. ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಈ ಕಾನೂನು ಕ್ರಮಗಳನ್ನು ಕೈಗೊಂಡಿದ್ದು, ಅವಾಮಿ ಲೀಗ್ ಪಕ್ಷವು ಇದನ್ನು “ರಾಜಕೀಯ ಪ್ರೇರಿತ” ಎಂದು ಕರೆದಿದೆ. ಮತ್ತೊಂದು ಮಹತ್ವದ ಅಂಶವೇದರೇ ಮಾನವಹಕ್ಕುಗಳ ಉಲ್ಲಂಘನೆ ಮಾಡಿದ್ದಕ್ಕಾಗಿ ಮರಣದಂಡನೆಯನ್ನು ವಿಧಿಸಲಾಗಿತ್ತು ಎನ್ನುವುದು ಗಮನಾರ್ಹ.

Harish Kiran Thunga

Harish Kiran Thunga is a journalist and editor based in Karnataka, India. He is actively involved in Udupi District Working Journalist Associations in the Udupi district. He serves as the Editor in Chief at Newsrays.in, a regional news portal. He also manages the Newsrays live YouTube channel, which features local news and short stories.

Join WhatsApp

Join Now

Leave a Comment

You cannot copy content of this page