ಟಾಲಿವುಡ್ನ ಬ್ಲಾಕ್ಬಾಸ್ಟರ್ ಸಿನಿಮಾ ಕುಬೇರ Kuberaa ಓಟಿಟಿಗೆ ott ಬರಲು ಸಿದ್ದವಾಗಿದೆ. ಶೇಖರ್ ಕಾಮುಲಾ Sekhar Kammula’s ಅವರ ನಿರ್ದೇಶನದ ಇತ್ತಿಚಿನ ಚಿತ್ರದಲ್ಲಿ ಧನುಷ್, Dhanush ನಾಗಾರ್ಜುನ Nagarajuna ಮತ್ತು ರಶ್ಮಿಕಾ ಮಂದಣ್ಣ Rashmika Mandanna ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಅಮೇಝಾನ್ ಪ್ರೈಮ್ನಲ್ಲಿ Prime Video ಜು.18ರಂದು ಬಿಡುಗಡೆಗೊಳ್ಳಲಿದ್ದು, ಈ ಬಗ್ಗೆ ಅಧಿಕೃತವಾಗಿ ಪ್ರೈಮ್ ವಿಡಿಯೋ ಘೋಷಿಸಿದೆ.
ಕುಬೇರ ಚಿತ್ರದ ಬಗ್ಗೆ ಬಿಡುಗಡೆಗೊಂಡ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಥೆಯ ಗಟ್ಟಿತನ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಚಿತ್ರ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಯಲ್ಲಿ ನೋಡಬಹುದು.