• August 22, 2025
  • Last Update August 21, 2025 9:01 pm
  • Australia

ಇನ್ನೂ 96 ಅಮೇರಿಕಾ ವಲಸಿಗರು ಭಾರತಕ್ಕೆ ವಾಪಾಸು

ನವದೆಹಲಿ: ಅಮೇರಿಕಾದಿಂದ 96 ಮಂದಿ ವಲಸಿಗರನ್ನು ಗಡಿಪಾರು ಮಾಡಲಾಗುವುದು ಎಂಬ ವಿಚಾರವನ್ನು ಭಾರತ ಸರ್ಕಾರ ದೃಡಪಡಿಸಿದೆ.

ಡೋನಾಲ್ಡ್‌ ಟ್ರಂಪ್‌ ಅಧಿಕಾರ ಸ್ವೀಕರಿಸಿದ ಬಳಿಕ ಪೌರತ್ವ ಪರಿಶೀಲನೆ ಪ್ರಕ್ರಿಯೆಗಳು ಬಿಗಿಗೊಂಡಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅನಧೀಕೃತ ವಲಸಿಗರನ್ನು ಪತ್ತೆಹಚ್ಚಿ ಅವರನ್ನು ಗಡಿಪಾರು ಮಾಡುವ ಕೆಲಸ ನಡೆಯಲಿದೆ ಎಂದು ತಿಳಿದುಬಂದಿದೆ.

ಇತ್ತಿಚಿಗೆ ಗಡಿಪಾರಾಗಿ ಬಂದವರಿಗೆ ಅಪರಾಧಿಗಳಂತೆ ಕೈಕೋಳ ಹಾಕಿ ಕರೆದುಕೊಂಡು ಬಂದಿರುವ ಬಗ್ಗೆ ಮತ್ತು ಅಮೇರಿಕಾದ ಅಧಿಕಾರಿಗಳು ನಡೆದುಕೊಂಡ ರೀತಿಯ ಬಗ್ಗೆ ಭಾರತ ಸರಕಾರವು ಪ್ರತಿಭಟಿಸಿದ್ದು, ಫೆ.12-13ರವರೆಗೆ ವಾಷಿಂಗ್‌ಟನ್‌ ಭೇಟಿಯಾಗಲಿದ್ದು, ಈ ಸಂದರ್ಭ ಪ್ರಧಾನಿ ಮೋದಿ ಅಧಿಕಾರಿಗಳ ವರ್ತನೆ ಬಗ್ಗೆ ಚರ್ಚಿಸಲಿದ್ದಾರೆ.

ಕಳೆದ 16 ವರ್ಷಗಳಲ್ಲಿ ಅಮೇರಿಕಾ ಸರಕಾರವು 15ಸಾವಿರಕ್ಕೂ ಅಧಿಕ ಭಾರತೀಯ ಅಕ್ರಮ ವಲಸಿಗರನ್ನು ಗಡಿಪಾರು ಮಾಡಿತ್ತು. ಇವೆರಲ್ಲರನ್ನೂ ಭಾರತ ಸರಕಾರ ವಾಪಾಸು ಕರೆಸಿಕೊಂಡಿದೆ. ಅದಾಗ್ಯೂ ಫೆ.5ರಂದು ಮಿಲಿಟರಿ ವಿಮಾನದ ಮೂಲಕ ಭಾರತೀಯರನ್ನು ಗಡಿಪಾರು ಮಾಡಿರುವುದು ಇದೇ ಮೊದಲು. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆಕ್ಷೇಪಿಸಲಾಗಿದೆ.

ಮಿಲಿಟರಿ ವಿಮಾನದ ಮೂಲಕ ಗಡಿಪಾರು ಮಾಡುವುದು ಅತ್ಯಂತ ವೇಗದ ಮಾರ್ಗವಾಗಿದೆ ಎಂದು ಯುಎಸ್‌ ಅಧಿಕಾರಿಗಳು ತಿಳಿಸುತ್ತಾರೆ. ಈಗಾಗಲೇ 487 ಶಂಕಿತ ಪ್ರಜೆಗಳು ಗಡಿಪಾರು ಆದೇಶವನ್ನು ಎದುರಿಸುತ್ತಿದ್ದಾರೆ. 295 ಮಂದಿಯ ವಿವರಗಳನ್ನು ಅಧಿಕಾರಿಗಳು ಹಂಚಿಕೊಂಡಿದ್ದು, ಅವರ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕ್ರಮ ಮಿಶ್ರಿ ಟೈಮ್ಸ್‌ಗೆ ಮಾಹಿತಿ ನೀಡಿದ್ದಾರೆ.

ಈಗಾಗಲೇ 203 ಮಂದಿ ಗಡಿಪಾರು ಪಟ್ಟಿಯಲ್ಲಿದ್ದು, 104ಮಂದಿ ವಾಪಾಸಾಗಿದ್ದಾರೆ. ಮುಂದಿನ 96 ಮಂದಿಯ ಪೌರತ್ವವನ್ನು ಭಾರತ ಸರಕಾರ ದೃಡಿಕರಿಸಿದೆ. ಭವಿಷ್ಯದಲ್ಲಿ ಗಡಿಪಾರಾಗುವ ಭಾರತೀಯರಿಗೆ ವಿಶೇಷ ವಿಮಾನ ಕಳುಹಿಸಲಾಗುವುದೇ ಎಂಬ ಬಗ್ಗೆ ಸೂಕ್ತ ಮಾಹಿತಿ ನೀಡದೇ ಇದ್ದರೂ ಸೂಕ್ತ ಪರ್ಯಾಯಕ್ಕಾಗಿ ಭಾರತ ಸರಕಾರ ಸಿದ್ದವಾಗಿದೆ ಎಂದಷ್ಟೇ ಹೇಳಿದರು.:ಅಮೇರಿಕಾದಿಂದ 96 ಮಂದಿ ವಲಸಿಗರನ್ನು ಗಡಿಪಾರು ಮಾಡಲಾಗುವುದು ಎಂಬ ವಿಚಾರವನ್ನು ಭಾರತ ಸರ್ಕಾರ ದೃಡಪಡಿಸಿದೆ.,

ಡೋನಾಲ್ಡ್‌ ಟ್ರಂಪ್‌ ಅಧಿಕಾರ ಸ್ವೀಕರಿಸಿದ ಬಳಿಕ ಪೌರತ್ವ ಪರಿಶೀಲನೆ ಪ್ರಕ್ರಿಯೆಗಳು ಬಿಗಿಗೊಂಡಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅನಧೀಕೃತ ವಲಸಿಗರನ್ನು ಪತ್ತೆಹಚ್ಚಿ ಅವರನ್ನು ಗಡಿಪಾರು ಮಾಡುವ ಕೆಲಸ ನಡೆಯಲಿದೆ ಎಂದು ತಿಳಿದುಬಂದಿದೆ.

ಇತ್ತಿಚಿಗೆ ಗಡಿಪಾರಾಗಿ ಬಂದವರಿಗೆ ಅಪರಾಧಿಗಳಂತೆ ಕೈಕೋಳ ಹಾಕಿ ಕರೆದುಕೊಂಡು ಬಂದಿರುವ ಬಗ್ಗೆ ಮತ್ತು ಅಮೇರಿಕಾದ ಅಧಿಕಾರಿಗಳು ನಡೆದುಕೊಂಡ ರೀತಿಯ ಬಗ್ಗೆ ಭಾರತ ಸರಕಾರವು ಪ್ರತಿಭಟಿಸಿದ್ದು, ಫೆ.12-13ರವರೆಗೆ ವಾಷಿಂಗ್‌ಟನ್‌ ಭೇಟಿಯಾಗಲಿದ್ದು, ಈ ಸಂದರ್ಭ ಪ್ರಧಾನಿ ಮೋದಿ ಅಧಿಕಾರಿಗಳ ವರ್ತನೆ ಬಗ್ಗೆ ಚರ್ಚಿಸಲಿದ್ದಾರೆ.

ಕಳೆದ 16 ವರ್ಷಗಳಲ್ಲಿ ಅಮೇರಿಕಾ ಸರಕಾರವು 15ಸಾವಿರಕ್ಕೂ ಅಧಿಕ ಭಾರತೀಯ ಅಕ್ರಮ ವಲಸಿಗರನ್ನು ಗಡಿಪಾರು ಮಾಡಿತ್ತು. ಇವೆರಲ್ಲರನ್ನೂ ಭಾರತ ಸರಕಾರ ವಾಪಾಸು ಕರೆಸಿಕೊಂಡಿದೆ. ಅದಾಗ್ಯೂ ಫೆ.5ರಂದು ಮಿಲಿಟರಿ ವಿಮಾನದ ಮೂಲಕ ಭಾರತೀಯರನ್ನು ಗಡಿಪಾರು ಮಾಡಿರುವುದು ಇದೇ ಮೊದಲು. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆಕ್ಷೇಪಿಸಲಾಗಿದೆ.

ಮಿಲಿಟರಿ ವಿಮಾನದ ಮೂಲಕ ಗಡಿಪಾರು ಮಾಡುವುದು ಅತ್ಯಂತ ವೇಗದ ಮಾರ್ಗವಾಗಿದೆ ಎಂದು ಯುಎಸ್‌ ಅಧಿಕಾರಿಗಳು ತಿಳಿಸುತ್ತಾರೆ. ಈಗಾಗಲೇ 487 ಶಂಕಿತ ಪ್ರಜೆಗಳು ಗಡಿಪಾರು ಆದೇಶವನ್ನು ಎದುರಿಸುತ್ತಿದ್ದಾರೆ. 295 ಮಂದಿಯ ವಿವರಗಳನ್ನು ಅಧಿಕಾರಿಗಳು ಹಂಚಿಕೊಂಡಿದ್ದು, ಅವರ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕ್ರಮ ಮಿಶ್ರಿ ಟೈಮ್ಸ್‌ಗೆ ಮಾಹಿತಿ ನೀಡಿದ್ದಾರೆ.

ಈಗಾಗಲೇ 203 ಮಂದಿ ಗಡಿಪಾರು ಪಟ್ಟಿಯಲ್ಲಿದ್ದು, 104ಮಂದಿ ವಾಪಾಸಾಗಿದ್ದಾರೆ. ಮುಂದಿನ 96 ಮಂದಿಯ ಪೌರತ್ವವನ್ನು ಭಾರತ ಸರಕಾರ ದೃಡಿಕರಿಸಿದೆ. ಭವಿಷ್ಯದಲ್ಲಿ ಗಡಿಪಾರಾಗುವ ಭಾರತೀಯರಿಗೆ ವಿಶೇಷ ವಿಮಾನ ಕಳುಹಿಸಲಾಗುವುದೇ ಎಂಬ ಬಗ್ಗೆ ಸೂಕ್ತ ಮಾಹಿತಿ ನೀಡದೇ ಇದ್ದರೂ ಸೂಕ್ತ ಪರ್ಯಾಯಕ್ಕಾಗಿ ಭಾರತ ಸರಕಾರ ಸಿದ್ದವಾಗಿದೆ ಎಂದಷ್ಟೇ ಹೇಳಿದರು.

administrator

Related Articles

Leave a Reply

Your email address will not be published. Required fields are marked *

error: Content is protected !!