• August 22, 2025
  • Last Update August 21, 2025 9:01 pm
  • Australia

ಬಂದೂಕಿನಿಂದ ಗುಂಡು ಮಿಸ್ ಫೈರ್- ಆಸ್ಪತ್ರೆಗೆ ದಾಖಲು

ಬಂದೂಕಿನಿಂದ ಗುಂಡು ಮಿಸ್ ಫೈರ್- ಆಸ್ಪತ್ರೆಗೆ ದಾಖಲು

ಮಂಗಳೂರು: ನಗರದ ಹೊರವಲಯದ ವಾಮಂಜೂರು ಸೆಕೆಂಡ್ ಹ್ಯಾಂಡ್ ಬಜಾರ್‌ನಲ್ಲಿ ರಿವಾಲ್ವರ್ ಮಿಸ್ ಫೈರ್ ಆಗಿ ಯುವಕನೋರ್ವನು ಗಾಯಗೊಂಡ ಘಟನೆ ಸೋಮವಾರ ನಡೆದಿದೆ.

ಸಫ್ವಾನ್ ಎಂಬಾತ ಗಾಯಾಳು ಯುವಕ

ಸೆಕೆಂಡ್ ಹ್ಯಾಂಡ್ ಬಜಾರ್‌ಗೆ ವಸ್ತುಗಳ ಖರೀದಿಗೆ ಸಫ್ವಾನ್ ಆಗಮಿಸಿದ್ದ. ಈ ವೇಳೆ ಟೇಬಲ್‌ನಲ್ಲಿ ರಿವಾಲ್ವರ್ ಗಮನಿಸಿದ್ದಾನೆ. ಈ ರಿವಾಲ್ವರ್ ಅನ್ನು ಆಟದ ವಸ್ತುವೆಂದು ಭಾವಿಸಿ ಸಫ್ವಾನ್ ತನ್ನ ಹೊಟ್ಟೆಗೆ ಗುರಿಯಾಗಿಟ್ಟುಕೊಂಡು ಫೈಯರ್ ಮಾಡಿಕೊಂಡಿದ್ದಾನೆ. ಪರಿಣಾಮ ಗುಂಡು ಸಿಡಿದು ಸಫ್ವಾನ್ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಸದ್ಯ ಗಾಯಾಳು ಯುವಕನನ್ನು ಪಡೀಲ್‌ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ರಿವಾಲ್ವರ್ ಅನ್ನು ಭಾಸ್ಕರ್ ಎಂಬವರು ಟೇಬಲ್ ಮೇಲೆ ಇಟ್ಟು ಹೋಗಿದ್ದರು ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

administrator

Related Articles

Leave a Reply

Your email address will not be published. Required fields are marked *

error: Content is protected !!