• August 23, 2025
  • Last Update August 21, 2025 9:01 pm
  • Australia

ಅವಿಭಜಿತ ದ.ಕ ಜಿಲ್ಲೆಗಳ ಜನರ ಶಿಸ್ತು ಎಲ್ಲರಿಗೂ ಮಾದರಿ: ಡಾ. ಗುರುರಾಜ್‌ ಖರ್ಜಗಿ

ಅವಿಭಜಿತ ದ.ಕ ಜಿಲ್ಲೆಗಳ ಜನರ ಶಿಸ್ತು ಎಲ್ಲರಿಗೂ ಮಾದರಿ: ಡಾ. ಗುರುರಾಜ್‌ ಖರ್ಜಗಿ

ಬ್ರಹ್ಮಾವರ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಶಿಸ್ತು ಎಲ್ಲರಿಗೂ ಮಾದರಿ ಎಂದು ಅಂತರಾಷ್ಟ್ರೀಯ ಶಿಕ್ಷಣ ತಜ್ಞ ಡಾ. ಗುರುರಾಜ್ ಕರ್ಜಗಿ ಹೇಳಿದರು.

ಅವರು ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜನಲ್ಲಿ ನಡೆದ ಸರಕಾರಿ ಒದವಿಪೂರ್ವ ಕಾಲೇಜನ್ನು ಹೆಗ್ಗುಂಜೆ ರಾಜೀವ ಶೆಟ್ಟಿ ಕೆಪಿಸ್ಕೂಲ್್ ಆಗಿ ನಾಮಕರಣ‌ಮಾಡುವ ಸಮಾರಂಭ ಮತ್ತು ಮೂರು‌ ಕೋಟಿ ಮೌಲ್ಯದ ಅಭಿವೃದ್ದಿ ಕಾಮಗಾರಿ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಗ್ರಾಮಾಂತರ ಭಾಗದಲ್ಲಿ ಕಲಿಯುವ ಹಸಿವು ಜಾಸ್ತಿ ಇದೆ. ಇದು ನಗರ ಭಾಗದವರಲ್ಲಿ ಕಾಣುವುದಕ್ಕೆ ಸಿಗುವುದಿಲ್ಲ. ಈ ಹಸಿವಿಗೆ ನೀರೇಯುವ ಕೆಲಸವನ್ನು ಮಾಡಲಾಗಿದೆ. ಎಚ್‌ಎಸ್‌ ಶೆಟ್ಟಿಯವರು ಕಟ್ಟಡಕ್ಕೆ ತಂದೆಯವರ ಹೆಸರು ನೀಡಿ ಮಾದರಿ ಮಗನಾಗಿದ್ದಾನೆ. ಏಕೆಂದರೆ ತಂದೆಯ ಹೆಸರನ್ನು ಶಾಶ್ವತವಾಗಿರುವಂತೆ ಮಾಡುವ ಕೆಲಸವನ್ನು ಶೆಟ್ಟರು ಮಾಡಿದ್ದಾರೆ. ಎಚ್‌.ಎಸ್‌ ಶೆಟ್ಟರು ಕೇವಲ ಶಾಲೆಯ ಕಟ್ಟಡವನ್ನು ಕಟ್ಟದೆ, ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿದ್ದಾರೆ ಎಂದರು.

ಕೊಟ್ಟವರು ಶಾಶ್ವತವಾಗಿ ಉಳಿದ್ದಿದ್ದಾರೆ. ಪಡೆದವರು ಹೆಸರು ಕೂಡ ಉಳಿದ್ದಿಲ್ಲ. ರಾಮನಿಂದ ಬಸವಣ್ಣನವರ ತನಕ ಸಮಾಜಕ್ಕೆ ಕೊಡುಗೆ ನೀಡಿದ ಎಲ್ಲರ ಹೆಸರು ಇಂದಿಗೂ ಜನಮಾನಸದಲ್ಲಿ ನೆನಪಿದೆ. ಆದರೆ ನಮ್ಮ ಮುತ್ತಾತನ ಮೊದಲ ಪೂರ್ವಜರ ಹೆಸರು ಯಾರಿಗೂ ಗೊತ್ತಿಲ್ಲ. ಇಲ್ಲೆ ಉದಾಹರಣೆ ಇದೆ. ತಮಗಾಗಿ, ತಮ್ಮವರಿಗಾಗಿ ಬದುಕು ಕಟ್ಟಿಕೊಂಡವರ ಹೆಸರು ಮುಂದಿನ ಪೀಳಿಗೆ ನೆನಪಿಟ್ಟುಕೊಂಡಿಲ್ಲ. ಆದರೆ ಸಮಾಜಕ್ಕಾಗಿ ದುಡಿದ ಹಿರಿಯರ ಹೆಸರು ಶಾಶ್ವತವಾಗಿ ಇರುತ್ತದೆ ಎಂದರು.

ದೇಶಕ್ಕೆ ಏನಾದರೂ ಹಾನಿಯಾಗಿದ್ದು, ಅನಕ್ಷರಸ್ಥರಿಂದ ಅಲ್ಲ, ಬುದ್ದಿವಂತ ಮೋಸಗಾರರಿಂದ ದೊಡ್ಡ ದೊಡ್ಡ ಡಿಗ್ರೀ ತೆಗೆದುಕೊಂಡು ಡಾಕ್ಟರ್‌ ಎಂಜಿನಿಯರ್‌ ಆಗುತ್ತಾರೆ. ರೋಗಿಗಳಿಗೆ ತಿಳಿಯದಂತೆ ಕಿಡ್ನಿ ತೆಗೆದು ಮಾರುತ್ತಾರೆ. ಉದ್ಘಾಟನೆಯಾದ ಎರಡೇ ತಿಂಗಳಿಗೆ ಕಟ್ಟಿದ ಸೇತುವೆ ಬಿದ್ದು ಹೋಗುತ್ತದೆ. ಬ್ಯಾಂಕ್‌ಗಳಿಗೆ ಮೋಸ ಮಾಡುವುವರು ಯಾರು? ಪರಿಣಿತ ಸಿಎಗಳೇ ಅವ್ಯವಹಾರಗಳನ್ನು ಮುಚ್ಚಿಹಾಕುತ್ತಾರೆ. ದೊಡ್ಡ ದೊಡ್ಡ ಕೇಸುಗಳಲ್ಲಿ ಅಪರಾಧಿಗಳನ್ನು ಖುಲಾಸೆಗೊಳಿಸುವವರು ಯಾರು ಎಲ್‌ಎಲ್‌ಬಿ ಪದವಿ ಪಡೆದ ವಕೀಲರು. ಉನ್ನತ ಶಿಕ್ಷಣ ಪಡೆದು ಭೃಷ್ಟಾರಾಗುತ್ತಿರುವುದು ಹೇಗೆ? ಶಿಕ್ಷಣ ಸರಿಯಾಗಿ ಸಿಗುತ್ತಿಲ್ಲವೇ ಅಥವಾ ಗುರಿಇಲ್ಲದ ಶಿಕ್ಷಣ ಅವರನ್ನು ಭೃಷ್ಟರನ್ನಾಗಿ ಮಾಡುತ್ತಿದೆಯಾ? ಇದೆಲ್ಲವನ್ನ ಚಿಂತನೆ ಮಾಡಬೇಕಾಗಿದೆ ಎಂದರು.

ಕಟ್ಟಡ ಹಸ್ತಾಂತರಿಸಿ ಮಾತನಾಡಿದ ಮಾಜಿ ಶಾಸಕ ರಘುಪತಿ ಭಟ್, ಈ ಶಾಲೆ ಹೆಗ್ಗುಂಜೆ ರಾಜೀವ್‌ ಶೆಟ್ಟಿ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಆದ ಹಿನ್ನೆಲೆ ಈ ಶಾಲೆಗೆ ಎರಡು ರೀತಿಯಲ್ಲಿ ಉಪಯೋಗ ಆಗಿದೆ. ಒಂದು ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ಅಲ್ಲದೆ ಕೆಪಿಎಸ್‌ ಸ್ಕೂಲ್‌ ಆಗಿ ಬದಲಾಗಿದೆ. ಕೆಪಿಎಸ್‌ ಆಗಿರುವುದು 40 ವಿದ್ಯಾರ್ಥಿಗಳಿಗೆ ಒಂದು ಶಿಕ್ಷಕರು ಸಿಗುತ್ತಾರೆ. ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ 70 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಎನ್ನುವ ಅನುಪಾತ ಇದೆ. ಅಂದರೆ ಗುಣಮಟ್ಟದ ಶಿಕ್ಷಣ ಇಲ್ಲಿ ಲಭ್ಯವಾಗುತ್ತದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ಎಚ್‌.ಎಸ್‌ ಶೆಟ್ಟಿ, 10 ತಿಂಗಳೊಳಗೆ ಕಟ್ಟಡ ನಿರ್ಮಾಣ ಮಾಡಿದ್ದೆವು ಆದರೆ ಹಸ್ತಾಂತರ ಮಾಡುವುದಕ್ಕೆ ಒಂದು ವರ್ಷದಿಂದ ಕಾಯ್ತಾ ಇದ್ದೇವು. ಅಧಿಕಾರಿಗಳಿಗೆ ಹಣ ನೀಡಿದ್ದರೆ ಬೇಗ ಕೊಡ್ತಾ ಇದ್ದರೋ ಏನೋ ಆದರೆ ಚಾರಿಟೇಬಲ್‌ ಟ್ರಸ್ಟ್‌ ಆಗಿರುವ ಕಾರಣ ನಾನು ಹಣ ನೀಡುವುದಕ್ಕೆ ಒಪ್ಪುವುದಿಲ್ಲ. ಶಾಲೆಗೆ ಸಂಬಂಧಿಸಿದ ಒಬ್ಬ ವ್ಯಕ್ತಿ ಕಟ್ಟಡ ನಿರ್ಮಾಣಕ್ಕೆ ಸಂಭಂಧಿಸಿದಂತೆ ಹಲವಾರು ಪ್ರಶ್ನೆಗಳನ್ನು ಕೇಳುತ್ತಾರೆ. ಶಾಲಾ ಕಟ್ಟಡ ನಿರ್ಮಾಣಕ್ಕೆ ಹೊರಟದಿಂನಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ಧಿಗಳನ್ನು ಹಬ್ಬಿಸಲು ಆರಂಭಿಸಿದರು. ಮೂರು ಕೋಟಿ ಹಾಕಿ 200 ಕೋಟಿ ಜಮೀನನ್ನು ಒಳ ಹಾಕಿಕೊಂಡರು. ಶಾಲೆಯನ್ನು ಖಾಸಗಿ ಮಾಡಿದರು ಎಂದೆಲ್ಲಾ ಹಬ್ಬಿಸಿದ್ದರು. ಸರಕಾರದಲ್ಲಿ ಅವಕಾಶ ಇದೆ. ಇಷ್ಟು ಪ್ರಮಾಣದಲ್ಲಿ ಹೂಡಿಕೆ ಮಾಡಿದರೆ ನಿಮಗೆ ಬೇಕಾದ ಹೆಸರನ್ನು ಇಡಬಹುದು ಎಂದು ಆ ಪ್ರಕಾರ ಹೂಡಿಕೆ ಮಾಡಿ ಶಾಲೆಯನ್ನು ಅಭಿವೃದ್ಧಿಪಡಿಸಿದ್ದೇವೆ. ಆ ಬಳಿಕ ನಮಗೆ ಇಲ್ಲಿ ಯಾವುದೇ ಹಕ್ಕು ಭಾಧ್ಯತೆ ಇರುವುದಿಲ್ಲ. ನಾವು ಒಂದು ಒಳ್ಳೆ ಕೆಲಸ ಮಾಡುವುದಕ್ಕೆ ಬಂದವರೇ ಹೊರತು ಶಾಲೆಯನ್ನು ಒಳಹಾಕುವುದಕ್ಕೆ ಬಂದವರಲ್ಲ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಯಶಪಾಲ್ ಸುವರ್ಣ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಹೆಗ್ಗುಂಜೆ ರಾಜೀವ ಶೆಟ್ಟಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲ ರವೀಂದ್ರ ಉಪಾಧ್ಯಾಯ, ನ್ಯಾಯವಾದಿ  ನಾಗರಾಜ ನಾಯಕ್, ಪದವಿಪೂರ್ವ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮಾರುತಿ ಮೊದಲಾದವರು ಇದ್ದರು.

ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಕೆ. ಗಣಪತಿ ಸ್ವಾಗತಿಸಿದರು. ಉಪನ್ಯಾಸಕಿ ಅರ್ಪಿತಾ ಕಾರ್ಯಕ್ರಮ ನಿರೂಪಿಸಿದರು.

administrator

Related Articles

Leave a Reply

Your email address will not be published. Required fields are marked *

error: Content is protected !!