• August 23, 2025
  • Last Update August 21, 2025 9:01 pm
  • Australia

ಡಿ.15ರಿಂದ ಬೆಣ್ಣೆಕುದ್ರು ಜಾತ್ರಾಮಹೋತ್ಸವ

ಡಿ.15ರಿಂದ ಬೆಣ್ಣೆಕುದ್ರು ಜಾತ್ರಾಮಹೋತ್ಸವ

 ಬಾರ್ಕೂರು: ಇತಿಹಾಸ ಪ್ರಸಿದ್ದ ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಡಿ.15ರಿಂದ ಡಿ.19ರವರೆಗೆ ಜರಗಲಿದೆ. ಡಿ.15ರಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದ್ದು, ಸಹಸ್ರಾರು ಭಕ್ತರು ಆಗಮಿಸಲಿದ್ದಾರೆ.

ಧಾರ್ಮಿಕ ಕಾರ್ಯಕ್ರಮಗಳು
ಡಿ.15 ಭಾನುವಾರ ಬೆಳಿಗ್ಗೆ ಗಂಟೆ 7:00 ರಿಂದ ಪ್ರಾರ್ಥನೆ, ಪುಣ್ಯಾಹ ದೇವನಾಂದಿ, ಅಗ್ನಿ ಜನನ, 108 ಕಾಯಿ ಗಣಹೋಮ, ನವಕ ಪ್ರಧಾನ ಕಲಶಾಭಿಷೇಕ, ಮಧ್ಯಾಹ್ನ ಗಂಟೆ 12:00ಕ್ಕೆ ಪೂರ್ಣಾಹುತಿ, ರಾತ್ರಿ ಗಂಟೆ 7:00ಕ್ಕೆ ಗುರುಮಠದ ಮೂಲ ಮನೆಯಲ್ಲಿ ತುಳಸಿ ಪೂಜೆ, ರಾತ್ರಿ ಗಂಟೆ 10:00ಕ್ಕೆ ಕೆಂಡಸೇವೆ 11:30ಕ್ಕೆ ರಂಗಪೂಜೆ, ತುಳಸಿ ಪೂಜೆ ಜರಗಲಿದೆ.
ಡಿ.16ರರ ಸೋಮವಾರ ಪೂರ್ವಾಹ್ನ 9:00ಕ್ಕೆ ಮಹಾಮಂಗಳಾರತಿ 10:00ಕ್ಕೆ ಪರಿವಾರ ದೇವರುಗಳ ನೃತ್ಯಸೇವೆ. 12:00ಕ್ಕೆ ತುಲಾಭಾರಾದಿ ಹರಕೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಅಪರಾಹ್ನ ಗಂಟೆ 3:00ಕ್ಕೆ ಮಹಾಮಂಗಳಾರತಿ, ಮಹಾಬಲಿ ಪೂಜೆ, ಸಂಜೆ 5:00ಕ್ಕೆ ಸೆಡಿ ಪೂಜೆ, ಬೆಳಗಿನ ಜಾವ ಗಂಟೆ 5:00ಕ್ಕೆ ತೆಪ್ಪೋತ್ಸವ (ಹೊಳೆಯಾನ) ಕಟ್ಟೆಪೂಜೆ ಜರಗಲಿದೆ.
ಡಿ.17ರ ಮಂಗಳವಾರ ಪೂರ್ವಾಹ್ನ 9:00ಕ್ಕೆ ಮಹಾಮಂಗಳಾರತಿ 10:00ಕ್ಕೆ ಪರಿವಾರ ದೇವರುಗಳ ನೃತ್ಯಸೇವೆ, ಗುರು ಪೀಠದಲ್ಲಿ ದೀಪಾರಾಧನೆ, 12:00ಕ್ಕೆ ತುಲಾಭಾರಾದಿ ಹರಕೆಗಳು, ಅಪರಾಹ್ನ ಗಂಟೆ 3:00 ರಿಂದ ಮುಳ್ಳುಹಾವಿಗೆ ಪಾದುಕೆ ಪೂಜೆ, ಬೆನಗಲ್ಲು ಪೂಜೆ, ಯೋಗಿ ಪುರುಷರ ದರ್ಶನ, ಬೊಬ್ಬರ್ಯ ದೇವರ ದರ್ಶನ, ಅಜ್ಜಮ್ಮ ದೇವರಿಗೆ ಹೂವು ಅರ್ಪಣೆ ಕಾರ್ಯಕ್ರಮಗಳು ಜರಗಲಿದೆ.
ಡಿ.18 ಬುಧವಾರ ಪೂರ್ವಾಹ್ನ ಗಂಟೆ 11:00ಕ್ಕೆ ನಾಗದೇವರ ದರ್ಶನ, ಗಂಟೆ 12:00ಕ್ಕೆ ಮಹಾಪೂಜೆ ಹಸಲ ದೈವ ಮತ್ತು ಕೋಳಿಯಾರ ದೈವದ ಪೂಜೆ ರಾತ್ರಿ ಗಂಟೆ 9:00ಕ್ಕೆ ಶ್ರೀ ಮಲೆಸಾವಿರ ಮತ್ತು ಪರಿವಾರ ದೈವಗಳ ಕೋಲ ಪ್ರಾರಂಭವಾಗಲಿದೆ.
ಡಿ.19 ಗುರುವಾರ ಬೆಳಗ್ಗೆ 6:00ಕ್ಕೆ ಮಲೆಸಾವಿರ ದೈವ ದರ್ಶನ, ಗಂಟೆ 8:00ಕ್ಕೆ ಹಾಲಾವಳಿ ಸೇವೆಗಳು ನಡೆಯಲಿದೆ.

ಜಾತ್ರೆಯ ಪ್ರಯುಕ್ತ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದ್ದು,
ಡಿ. 15ರಂದು ಅಪರಾಹ್ನ ಗಂಟೆ 3:00 ರಿಂದ ಸಂಜೆ 5:00ರ ತನಕ ಶ್ರೀ ಕುಲಮಹಾ ಮಹಿಳಾ ಭಜನಾ ಮಂಡಳಿಯವರಿಂದ, ರಾತ್ರಿ ಗಂಟೆ 2:00 ರಿಂದ 4:00ರ ತನಕ ಸ್ಥಳೀಯ ಭಜನಾ ಮಂಡಳಿಯವರಿಂದ, ಡಿ16ರ ಪ್ರಾತಃಕಾಲ ಗಂಟೆ 4:00 ರಿಂದ 6:00ರ ತನಕ ಶ್ರೀ ವಿನಾಯಕ ಭಜನಾ ಮಂಡಳಿ, ನಾಗರಮಠ ಇವರಿಂದ ಭಜನಾ ಕಾರ್ಯಕ್ರಮ ಜರಗಲಿದೆ.
ಡಿ.16ರರಂದು ಸಂಜೆ 6ಕ್ಕೆ ಮೊಗವೀರ ಯುವಕ ಸಂಘ ಬೆಣ್ಣೆಕುದ್ರು ಬಾರ್ಕೂರು ಇವರಿಂದ ಸಾಂಸ್ಕೃತಿಕ ವೈಭವ
ಡಿ.17ರಂದು ಸಂಕೆ 6ಕ್ಕೆ ಮೊಗವೀರ ಮಹಿಳಾ ಸಂಘ ಬೆಣ್ಣೆಕುದ್ರು ಬಾರ್ಕೂರು.ಇವರಿಂದ ಸಾಂಸ್ಕೃತಿಕ ವೈಭವ ಜರಗಲಿದೆ.

ಡಿ.15ರಂದು ಹೊರೆಕಾಣಿಕೆ ಮೆರವಣಿಗೆ ಜರಗಲಿದ್ದು, ಮಧ್ಯಾಹ್ನ 3.00ಗಂಟೆಗೆ ಸರಿಯಾಗಿ ಬಾರ್ಕೂರು ಕಲ್ಲು ಚಪ್ಪರದಲ್ಲಿ ಸಮಾವೇಶ ಜರಗಲಿದೆ. ಆ ಬಳಿಕ ಹೊರೆಕಾಣಿಕೆ ಮೆರವಣಿಗೆ ಗಣ್ಯರ ಸಮ್ಮುಖದಲ್ಲಿ ದೇಗುಲಕ್ಕೆ ಬರಲಿದೆ
ಜಾತ್ರಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲಿ ಸರ್ವರೂ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಕೃತಾರ್ಥರಾಗಬೇಕೆಂದು ದೇವಳದ ಆಡಳಿತ ಮಂಡಳಿ ಕೋರಿದೆ.

 

administrator

Related Articles

Leave a Reply

Your email address will not be published. Required fields are marked *

error: Content is protected !!