ಕುಂದಾಪುರ: ಗ್ಯಾಸ್ ಸಾಗಾಟ ವಾಹನ ಮತ್ತು ಬೈಕ್ ನಡುವಿನ ಅಪಾಘಾತದಲ್ಲಿ ಪ್ರವಾಸಿಗ ಸಾವನ್ನಪ್ಪಿದ ಘಟನೆ ಅರಾಟೆ ಸೇತುವೆ ಮೇಲೆ ಸಂಭವಿಸಿದೆ.
ಬೈಕ್ ಸವಾರ ಮಂಗಳೂರು ಮೂಲದ ರಂಜಿತ್ ಬಲ್ಲಾಳ (೫೯) ಎಂದು ಗುರುತಿಸಲಾಗಿದ್ದು, ತಮ್ಮ ಬಿಎಂಡ್ಬ್ಲೂ ಬೈಕ್‌ನಲ್ಲಿ ಗೋವಾದಿಂದ ಮಂಗಳೂರಿಗೆ ತೆರಳುತ್ತಿದ್ದರು. ಅರಾಟೆ ಸೇತುವೆ ಬಳಿ ಗ್ಯಾಸ್ ಸಾಗಾಟದ ವಾಹನ ಬೈಕ್‌ಗೆ ಢಿಕ್ಕಿ ಹೊಡೆದಿದೆ. ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.