ಕೋಟ: ಹೆದ್ದಾರಿ ಜಾಗೃತಿ ಸಮಿತಿಯಿಂದ ಹೆದ್ದಾರಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಬೃಹತ್ ಹೋರಾಟ ನ.28ರಂದು ಚಿತ್ರಪಾಡಿಯ ಮಾರಿಗುಡಿ ಬಳಿ ನಡೆಯಲಿದೆ.
ಡಾಂಬರ್ ಕಿತ್ತುಹೋದ ರಸ್ತೆ, ಹೊಂಡಬಿದ್ದ ಪಾದಾಚಾರಿ ಮಾರ್ಗ, ಹುಲ್ಲು ಬೆಳೆದಿರುವ ರಸ್ತೆಯ ಇಕ್ಕೆಲ, ಹೂಳು ತುಂಬಿರುವ ಚರಂಡಿ, ಬಿಳಿ ಪಟ್ಟಿ ಕಾಣದಿರುವ ರಸ್ತೆ ಹಲವಾರು ಸಮಸ್ಯೆಗಳು ಹೆದ್ದಾರಿಯಲ್ಲಿ ನಿತ್ಯ ಜನರನ್ನು ಕಾಡುತ್ತಿದೆ. ಆದರೂ ನಿರ್ವಹಣೆ ಹೊಣೆ ಹೊತ್ತ ಕೆಕೆಆರ್ ಕಂಪೆನಿ ಸಮಸ್ಯೆಗಳನ್ನು ಕಂಡು ಕಾಣದಂತೆ ವರ್ತಿಸುತ್ತಿದೆ ಈ ಕಾರಣಕ್ಕೆ ಹೋರಾಟಕ್ಕೆ ಸಾರ್ವಜನಿಕರು ಸಿದ್ದರಾಗಿದ್ದಾರೆ. ಈ ಪ್ರತಿಭಟನೆಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದಾರೆ.

ವಿಶಿಷ್ಟ ಪ್ರತಿಭಟನೆ
ಹೆದ್ದಾರಿ ಜಾಗೃತಿ ಸಮಿತಿಯ ಸಂಚಾಲಕ, ಪ್ರತಾಪ್ ಶೆಟ್ಟಿ ನ್ಯೂಸ್ ರೇ’ಸ್ ಜೊತೆ ಮಾತನಾಡಿ, ನಾಳೆ ಕೆಕೆಆರ್ ಕಂಪೆನಿಯ ಮರಣ ಡೋಲು ಜೊತೆ ಬಾರಿಸುವ ಜೊತೆ ವಿಶಿಷ್ಠ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಈ ಸಾರ್ವಜನಿಕ ಪ್ರತಿಭಟನೆಗೆ ಜನಬೆಂಬಲ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಪ್ರತಿಭಟನೆ ನಡೆಯಬಾರದು ಎಂಬ ದೃಷ್ಟಿಯಲ್ಲಿ ಸಾಕಷ್ಟು ಕಸರತ್ತು ಕೆಕೆಆರ್ ನಡೆಸುತ್ತಿದೆ. ಈಗಾಗಲೇ ಹೊಂಡಬಿದ್ದ ರಸ್ತೆಗೆ ತೇಪೆ ಹಾಕುವ ಕೆಲಸ ಮಾಡಲು ಹೊರಟಿದೆ. ಆದರೆ ನಾವು ಯಾವ ಕಾರಣಕ್ಕೂ ಹಿಂದೇಟು ಹಾಕುವ ಪ್ರಶ್ನೇಯೇ ಇಲ್ಲ. ಮೊನ್ನೆ ಕೂಡ ಪ್ರತಿಭಟನೆ ನಡೆಸಿದ ಸಂದರ್ಭ ತೆಕ್ಕಟ್ಟೆಯ ಹೊಂಡ ಬಿದ್ದ ರಸ್ತೆಯ ಡಾಂಬರು ಕಿತ್ತರು. ಮತ್ತೇ ಇವತ್ತೇ ಅವರು ಪುನಃ ಡಾಂಬರು ಹಾಕುವ ಕೆಲಸಕ್ಕೆ ಹೊರಟಿದ್ದಾರೆ. ಪ್ರತಿಭಟನೆ ಮಾಡಿದರೇ ಮಾತ್ರ ಕೆಲಸವಾಗುವುದಾದರೆ ನಾವು ಪ್ರತಿಭಟಿಸುತ್ತೇವೆ ಎಂದು ಪ್ರತಾಪ್ ಶೆಟ್ಟಿ ಹೇಳಿದರು