ಉಡುಪಿ: ಬ್ರಹ್ಮಾವರ ಠಾಣೆಯಲ್ಲಿ ಲಾಕಪ್ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಸಿಎಂ ಬಳಿ ಕುಟುಂಬಸ್ಥರು ದೂರು ಸಲ್ಲಿಸಿದ್ದಾರೆ.
ಬಿಜು ಮೋಹನ್ ನ.9ರಂದು ಕುಡಿದು ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಬ್ರಹ್ಮಾವರ ಠಾಣೆ ಪೊಲೀಸರು ಬಂಧಿಸಿದ್ದರು. ಬೆಳಗಿನ ಜಾವ 3.00 ಗಂಟೆ ಸುಮಾರಿಗೆ ಲಾಕಪ್ನಲ್ಲಿದ್ದಾಗಲೆ ಕುಸಿದು ಬಿದ್ದು ಮೃತಪಟ್ಟಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಬಿಜು ಮೋಹನ್ ದೇಹದ ಮೇಲೆ ಗಾಯದ ಗುರುತುಗಳಿದೆ ಎಂದು ಆರೋಪಿಸಿರುವ ಕುಟುಂಬಸ್ಥರು ಇದೊಂದು ಅಸಹಜ ಸಾವು ಎಂದು ಕೇರಳ ಸಿಎಂಗೆ ಮನವಿ ಸಲ್ಲಿಸಿದ್ದಾರೆ.
ಬಿಜು ಮೋಹನ್ ಸಹೋದರ ಯೋಹಾನ್ನಾನ್ “ಮಹಿಳೆಯೋರ್ವ ದೂರಿನ ಮೇಲೆ ಬಂಧಿಸಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ ಆದರೆ ಮಹಿಳೆ ದೂರು ಕೊಟ್ಟ ಬಗ್ಗೆ ಯಾವುದೇ ದೂರಿನ ಯಾವುದೇ ಮಾಹಿತಿ ನೀಡಿಲ್ಲ. ಜಿಲ್ಲಾ ಮ್ಯಾಜಿಸ್ಟೇಟ್ ಅನುಮತಿ ಮೇರೆಗೆ ಮೃತದೇಹವನ್ನು ಪರಿಶೀಲಿಸಲಾಗಿದ್ದು, ದೇಹದಲ್ಲಿ ಸಾಕಷ್ಟು ಗಾಯದ ಗುರುತುಗಳಿದೆ. ಹೀಗಾಗಿ ಬ್ರಹ್ಮಾವರ ಪೊಲೀಸರ ಮೇಲೆ ಅನುಮಾನವಿದೆ” ಎಂದು ಆರೋಪಿಸಿದ್ದಾರೆ.
ಕೇರಳ ಸಿಎಂ ಅವರ ಗಮನಕ್ಕೂ ತರಲಾಗಿದೆ. ಜೊತೆಯಲ್ಲಿ ಸಿಐಡಿ ಅಧಿಕಾರಿಗಳಿಗೂ ಕೂಲಂಕೂಷ ತನಿಖೆಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
- MRPL ವಿಷಾನಿಲ ಸೋರಿಕೆ: ಇಬ್ಬರು ಸಾವು
- ಇನ್ನೂ 96 ಅಮೇರಿಕಾ ವಲಸಿಗರು ಭಾರತಕ್ಕೆ ವಾಪಾಸು
- ರಾ.ಹೆ ಕಾಮಗಾರಿ ವಿಳಂಬ ಪ್ರತಿಭಟನೆ ಕಾಂಗ್ರೆಸ್ ನಾಟಕ: ಪ್ರಥ್ವಿರಾಜ್
- Rashmika Mandanna: ಈ ಪಾತ್ರವನ್ನೂ ಒಪ್ಪಿಕೊಂಡ್ರಾ!
- ಓಟಿಟಿಗೆ ಬರಲು ಸಿದ್ದನಾದ ಕುಬೇರ
- ಬಜೆಟ್ ನಲ್ಲಿ ಉಡುಪಿ ಜಿಲ್ಲೆಯ ಸಂಪೂರ್ಣ ನಿರ್ಲಕ್ಷ:ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ
- ಎಸ್ಪಿ ಕಚೇರಿ ಮುತ್ತಿಗೆಗೆ ಯುವಮೋರ್ಚಾ ಬೆಂಬಲ
- ಕಾರ್ಕಳ ಶ್ರೀಕಾಂತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲು
- ಮಹೇಶ್ ಶೆಟ್ಟಿ ತಿಮರೋಡಿ ಜಾಮೀನು ಅರ್ಜಿ ತಿರಸ್ಕೃತ: ಬೆಂಬಲಿಗರಿಂದ ಕಣ್ಣೀರು
- ಹಿಂದೂ ಮುಖಂಡರುಗಳ ಮೇಲೆ ಕೇಸು ದಾಖಲಿಸುವುದೇ ಕಾಂಗ್ರೆಸ್ ಸಾಧನೆ: ಬಿಲ್ಲಾಡಿ ಪ್ರಥ್ವೀರಾಜ್ ಶೆಟ್ಟಿ
- ಮರುಎಣಿಕೆ ಕಾನೂನು ನೀಡಿದ ಹಕ್ಕು: ಸಹಕಾರಿ ಮಿತ್ರರು
- MS SILVER WHISPER ಮಂಗಳೂರು ಬಂದರಿಗೆ
- ನಾಗನ ಕಟ್ಟೆಗೆ ಹಾನಿಗೈದ ಆರೋಪ- ಅನ್ಯಕೋಮಿನ ಯುವಕ ಅರೆಸ್ಟ್
- 198ರಲ್ಲಿ 81ದೂರುಗಳು ಇತ್ಯರ್ಥ – ನ್ಯಾ.ಮೂ. ಬಿ.ವೀರಪ್ಪ