ಕುಂಭಾಶಿ: ಸರ್ಕಾರಿ ಶಾಲೆಗಳನ್ನು ಎಲ್ಲಾ ಕಡೆ ಪ್ರೋತ್ಸಾಹಿಸಿ ಬೆಳೆಸುತ್ತಿದ್ದಾರೆ. ಶ್ರೀನಿವಾಸ ರಾಯರು ನೀಡಿದ ಈ ಪ್ರಾಜೆಕ್ಡರ್ ಕೊಠಡಿ, ಖಾಸಗಿ ಶಾಲೆಗಳನ್ನು ಮೀರಿ ಬೆಳೆಸುವಂತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಹೇಳಿದರು.
ಅವರು ಕುಂಭಾಶಿಯ ವಿನಾಯಕ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಗೋಪಾಡಿ ಶ್ರೀನಿವಾಸ ರುಕ್ಮಿಣಿ ಫೌಂಡೆಶನ್ ಕೊಡ ಮಾಡಿದ ಪ್ರಾಜೆಕ್ಟರ್ ಕೊಠಡಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು.

ಟ್ರಸ್ಟ್ನ ಪ್ರವರ್ತಕ ಗೋಪಾಡಿ ಶ್ರೀನಿವಾಸ ರಾವ್ ಮಾತನಾಡಿ, ಬಡತನದಲ್ಲಿ ಹುಟ್ಟಿ ಬೆಳೆದ ನಮಗೆ ಈ ಶಾಲೆ ಹಲವು ನೆನಪುಗಳನ್ನು ಹಸಿರಾಗಿಸಿದೆ. ನಾವು ಕೊಟ್ಟಿದ್ದು ಸಹಾಯ ಅಲ್ಲ ಸ್ವೀಕರಿಸಿದ್ದು ಮಾತ್ರ ಸಹಾಯ. ಸಮಾಜ ಕೊಟ್ಟಿದ್ದನ್ನು ವಾಪಾಸುಕೊಡುವುದು ಸಹಾಯ ಹೇಗಾಗುತ್ತದೆ ಎಂದರು.

ನಾನು ಚಿಕ್ಕಂದಿನಿಂದ ಕಲಿತು ಬಂದಿದ್ದು ಸ್ವಚ್ಚತೆ ಮತ್ತು ಶಿಸ್ತು, ಅದನ್ನು ನನ್ನ ಜೀವನದುದ್ದಕ್ಕೂ ಅಳವಡಿಸಿಕೊಂಡು ಬಂದಿದ್ದೇನೆ. ನಾವು ಕೆಲಸ ಮಾಡುವ ಸ್ಥಳ ಸ್ವಚ್ಚವಾಗಿದ್ದರೆ ಮಾತ್ರ ಕೆಲಸ ಮಾಡುವ ನಮ್ಮ ಮನಸ್ಸು ಕೂಡ ಸ್ವಚ್ಚವಾಗಿರುತ್ತದೆ. ಆದ್ದರಿಂದ ಮಕ್ಕಳಿಗೂ ಕೂಡ ಆ ಸ್ವಚ್ಚತೆಯ ಪಾಠ ಚಿಕ್ಕಂದಿನಲ್ಲೇ ಕಲಿಸಬೇಕು ಆಗ ಮಾತ್ರ ದೊಡ್ಡವರಾದ ಮೇಲೂ ಕಲಿಯುತ್ತಾರೆ ಎಂದರು.

ನಾವು ಕೇಳಿದ್ದು ಚಿಕ್ಕ ಪ್ರಾಜೆಕ್ಟರ್ ಆದರೆ ಕೊಟ್ಟಿದ್ದು, ಪ್ರಾಜೆಕ್ಟರ್ ಕೊಠಡಿ. ಕೇವಲ ಕೊಠಡಿಯಲ್ಲ, ಸಂಪೂರ್ಣ ವ್ಯವಸ್ಥೆ ಹೊಂದಿರುವ ಕೊಠಡಿಯನ್ನು ಕೊಠಡಿ ಶ್ರೀನಿವಾಸ ರಾಯರ ಈ ಕೆಲಸ ಬೇರೆಯವರಿಗೂ ಪ್ರೇರಣೆ ಎಂದು ಎಸ್ಡಿಎಂಸಿ ಅಧ್ಯಕ್ಷ ರಾಜೇಶ್ ಪೈ ಹೇಳಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ವೇ.ಮೂ ಶ್ರೀಪತಿ ಉಪಾಧ್ಯಾಯ, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ವಿಶ್ರಾಂತ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯ, ರಮಣ ಉಪಾಧ್ಯ, ರುಕ್ಮಿಣಿ ಶ್ರೀನಿವಾಸ್ ರಾವ್, ಗ್ರಾ.ಪಂ ಅಧ್ಯಕ್ಷ ಆನಂದ್, ಟ್ರಸ್ಟಿ ಸುಹಾಸ್ ಉಪಾಧ್ಯಾಯ, ಯು.ಎಸ್ ಶೆಣೈ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಟ್ರಸ್ಟಿ ಅಮೃತ್ ತವಳ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.