ಮಣಿಪಾಲ: ಉಡುಪಿ ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್‌ನ 191 ಟವರ್‌ಗಳಿದ್ದು ಅವುಗಳ ಪೈಕಿ ಬಹಳಷ್ಟು ಟವರ್‌ಗಳು 3ಜಿಯಿಂದ 4ಜಿಗೆ ಮೇಲ್ದರ್ಜೆಗೇರಲು ವಿಳಂಬವಾಗುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಕ್ಷೇಪಿಸಿದರು.
ಅವರು ಬುಧವಾರ ರಜತಾದ್ರಿಯ ಸಂಸದರ ಕಚೇರಿಯಲ್ಲಿ ನಡೆದ ಬಿಎಸ್‌ಎನ್‌ಎಲ್ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿ, ಸುಮಾರು ೬೦ಕ್ಕೂ ಅಧಿಕ ಟವರ್‌ಗಳು ಬ್ಯಾಟರಿ ಕೊರತೆಯಿಂದ ಕಾರ್ಯನಿರ್ವಹಿಸಲು ತೊಂದರೆಯಾಗುತ್ತಿದೆ. ಕೆಲವು ಕಡೆಗಳಲ್ಲಿ ಜನರೇಟರ್ ವ್ಯವಸ್ಥೆ ಇದ್ದರೂ ಕೂಡ ನಿರ್ವಹಣೆ ಕೊರತೆ ಗುತ್ತಿಗೆದಾರರ ಸಮಸ್ಯೆಯಿಂದ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದರು.
ಈ ವಿಚಾರವಾಗಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಂಸದರು ಬ್ಯಾಟರಿಗಳು ಬಂದಿದೆ ಆದರೆ ಅಳವಡಿಸಿಲ್ಲ ಅಧಿಕಾರಿಗಳು ಹೇಳಿದರು.
ಇದಕ್ಕೆ ಸಂಸದರು ಆಕ್ಷೇಪಿಸಿ, ಬ್ಯಾಟರಿ ಬಂದರೂ ಅಳವಡಿಸದೇ ಇರುವುದಕ್ಕೆ ಕಾರಣ ಕೇಳಿದರು. ಇದಕ್ಕೆ ಉತ್ತರಿಸಿದ ಸಹಾಯಕ ಎಂಜಿನಿಯರ್ ಜನಾರ್ದನ ಗುತ್ತಿಗೆದಾರರು ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಸಾಕಷ್ಟು ತೊಂದರೆಗಳಾಗಿದೆ ಎಂದರು. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಸದರು ಸೂಚಿಸಿದರು.
ಸುಮಾರು 30ಕ್ಕೂ ಹೆಚ್ಚು ಹೊಸ ಟವರ್ಗಳಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ಎಲ್ಲಾ ಟವರ್‌ಗಳಿಗೂ ತಕ್ಷಣ ಅನುಮತಿ ನೀಡುವಂತೆ ಸೂಚನೆ ನೀಡಿದರು.
ಕೇಂದ್ರ ಸರಕಾರದ ಪ್ರತಿಷ್ಠಿತ ಇಲಾಖೆಯಾಗಿರುವ ಬಿಎಸ್‌ಎನ್‌ಎಲ್ ಖಾಸಗಿ ಕಂಪೆನಿಗಳಿಗೆ ಸಡ್ಡು ಹೊಡೆಯುವಂತೆ ಬೆಳೆಯಬೇಕು ಆಗ ಮಾತ ಜನರಿಗೆ ವಿಶ್ವಾಸ ಬರುವುದಕ್ಕೆ ಸಾಧ್ಯ. ಎಲ್ಲಾ ಅಧಿಕಾರಿಗಳು ಒಟ್ಟಾಗಿ ಈ ಕುರಿತು ಕೆಲಸ ಮಾಡಿ, ಹಳ್ಳಿ ಹಳ್ಳಿಗೂ ಮೊಬೈ ಸಂಪರ್ಕ ಸಿಗುವಂತೆ ಮಾಡಬೇಕು ಎಂದರು.
ಬ್ಯಾಟರಿ ಮತ್ತು ಸೋಲಾರ್ ಪ್ಯಾನೆಲ್‌ಗಳು ಕಳಪೆ ಗುಣಮಟ್ಟದಲ್ಲಿ ಬರುತ್ತಿದೆ ಇದರಿಂದ ಗುಣಮಟ್ಟದ ಸೇವೆ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಮ್ಮ ಸಮಸ್ಯೆ ತೋಡಿಕೊಂಡರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಈ ಬಗ್ಗೆ ಗಮನಸೆಳೆಯುತ್ತೇನೆ ಎಂದು ಸಂಸದರು ಹೇಳಿದರು.
ಬಿಎಸ್‌ಎನ್‌ಎಲ್ ಟವರ್ ನಿರ್ವಹಣೆಗೆ ಪೈಲೆಟ್ ಯೋಜನೆಯನ್ನು ಯೋಜಿಸಿರುವುದಾಗಿ ತಿಳಿಸಿದ ಸಂಸದರು. ಗ್ರಾ.ಪಂ ಮಟ್ಟದಲ್ಲಿ ನಿರ್ವಹಣೆಗೆ ೨೦ ಗ್ರಾಮಗಳನ್ನು ಪೈಲೆಟ್ ಆಗಿ ಆಯ್ಕೆ ಮಾಡಿ ನಿರ್ವಹಣೆ ಜವಬ್ದಾರಿಯನ್ನು ಅವರಿಗೆ ನೀಡುವುದಾಗಿ ಆಲೋಚನೆ ಮಾಡಿರುವುದಾಗಿ ಅವರು ತಿಳಿಸಿದರು. ಈ ಬಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಬಿಎಸ್‌ಎನ್‌ಎಲ್ ಡಿಜಿಎಂ ನವೀನ್ ಗುಪ್ತ ಎಜಿಆರ್‌ಎಂ ಬಿಂಧು ಮುರಳೀಧರ್ ಮೊದಲಾದವರು ಇದ್ದರು.