• August 22, 2025
  • Last Update August 21, 2025 9:01 pm
  • Australia

ಸ್ಟಾಕ್ ಮಾರ್ಕೆಟ್‌‌- ಲಾಭದ ಆಮೀಷ: 10ಲಕ್ಷ ರೂ. ವಂಚನೆ

ಸ್ಟಾಕ್ ಮಾರ್ಕೆಟ್‌‌- ಲಾಭದ ಆಮೀಷ: 10ಲಕ್ಷ ರೂ. ವಂಚನೆ

ಮಂಗಳೂರು: ಸ್ಟಾಕ್ ಮಾರ್ಕೆಟ್‌ನಲ್ಲಿ ಅಧಿಕ ಲಾಭಾಂಶದ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ 10ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಿರ್ಯಾದಿದಾರರನ್ನು ಸೆಪ್ಟೆಂಬರ್ 23ರಂದು ಆರೊಪಿಗಳು VGP966/Kotak Stock market guidance ಹೆಸರಿನ ವಾಟ್ಸ್ಆ್ಯಪ್ ಗ್ರೂಪ್‌ಗೆ ಸೇರ್ಪಡೆಗೊಳಿಸಿದ್ದಾರೆ. ಬಳಿಕ ಹೆಚ್ಚಿನ ಲಾಭದ ಸ್ಕೀಮ್‌ಗಳ ಸಂದೇಶ ಬಂದ ಹಿನ್ನಲೆಯಲ್ಲಿ https://kotak2024.XYZ ಲಿಂಕ್ ತೆರೆದು ನೋಂದಣಿ ಮಾಡಿರುತ್ತಾರೆ. ಬಳಿಕ SHRIFAL SHAH ಪ್ರಿನ್ಸಿಪಾಲ್ ಆಫ್ ಕೊಟಕ್ ಸೆಕ್ಯೂರಿಟೀಸ್ ಎಂಬಾತ ಹೆಚ್ಚಿನ ಆದಾಯವಿರುವ ಸ್ಕೀಮ್‌ಗಳಿಗೆ ಹಣ ಹೂಡಿಕೆ ಮಾಡಲು ತಿಳಿಸಿದಂತೆ ಪಿರ್ಯಾದಿದಾರರು 30.09.2024 ರಿಂದ 06.11.2024ರವರೆಗೆ ಅಂದಾಜು 10,55,912/- ರೂ. ಹಣವನ್ನು ಅವರು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಹೂಡಿಕೆ ಮಾಡಿದ್ದಾರೆ.

07.11.2024 ರಂದು ಹೂಡಿಕೆ ಮಾಡಿದ ಮೊತ್ತ ಹಾಗೂ ಲಾಭಾಂಶವನ್ನು ನಗದಿಕರಿಸಲು ಪ್ರಯತ್ನಿಸಿದಾಗ ಹೆಚ್ಚಿನ ಹೂಡಿಕೆ ಮಾಡಿದ್ದಲ್ಲಿ ಮಾತ್ರ ಹಣ ಪಡೆಯಲು ಸಾಧ್ಯತೆ ಬಗ್ಗೆ ಸೂಚಿಸಿದ ಮೇರೆಗೆ ಇದೊಂದು ವಂಚನೆಯ ಜಾಲ ಎಂದು ತಿಳಿದು ಬಂದಿದೆ. ಅದರಂತೆ ಅವರು ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *

error: Content is protected !!