ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಯೊಬ್ಬರು ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಐರೋಡಿ ಗ್ರಾಮದ ಹುಣ್ಸೆಬೆಟ್ಟಿನಲ್ಲಿ ಬುಧವಾರ ಸಂಭವಿಸಿದೆ.
ಐರೋಡಿ ಗ್ರಾಮಪಂಚಾಯತ್ ಹಿಂದಿನ ರಸ್ತೆಯಲ್ಲಿರುವ ಹುಣ್ಸೆಬೆಟ್ಟು ನಿವಾಸಿ ಕೃಷ್ಣ ಪೂಜಾರಿ(48) ತಮ್ಮ ಮನೆಯ ಕಟ್ಟಿಗೆ ಕೂಡಿಡಯವ ಕೊಟ್ಟಿಗೆಯ ಪಕ್ಕಾಸಿಗೆ ನೈಲಾನು ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಹೃದಯ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದು, ಕೈಕಾಲುಗಳು ಊತಗೊಂಡು ನಡೆಯಲು ಕಷ್ಟಪಡುತ್ತಿದ್ದರು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.
ಬುಧವಾರ ಮಧ್ಯಾಹ್ನ 2.30ರ ಸುಮಾರಿಗೆ ಇವರ ಪತ್ನಿ ಊಟ ಹಾಕಿ ಕೂಲಿ ಕೆಲಸಕ್ಕೆ ತೆರಳಿದ್ದರು. ಸಂಜೆ 4.45ರ ಸುಮಾರಿಗೆ ಸಂತೆಕಟ್ಟೆಯಲ್ಲಿ ಕಾಲೆಜು ಶಿಕ್ಷಣ ಪಡೆಯುತ್ತಿದ್ದ ಮಗಳು ಬಂದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಈ ಸಂದರ್ಭ ಅಪ್ಪ ವಾಕಿಂಗ್ ಗೆ ಹೋಗಿರಬೇಕು ಎಂದು ತನ್ನ ಕೆಲಸಗಳನ್ನು ಪೂರೈಸಿ, 5.15ರ ಸುಮಾರಿಗೆ ಸ್ನಾನಕ್ಕೆ ಬಿಸಿನೀರಿಗೆ ಬೆಂಕಿ ಮಾಡಲೇಂದು ಕೊಟ್ಟಿಗೆಗೆ ಹೋದಾಗ, ತಂದೆ ಕೊಟ್ಟಿಗೆ ಪಕ್ಕಾಸಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿದ್ದರು.
ಕೋಟ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಅಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿದ್ದಾರೆ. ಜೀವನ್ಮಿತ್ರ ನಾಗರಾಜ್ ಪುತ್ರನ್ ಅವರ ಅಂಬ್ಯುಲೆನ್ಸ್ನಲ್ಲಿ ಬ್ರಹ್ಮಾವರ ಸಮುದಾಯ ಕೇಂದ್ರದ ಶವಾಗಾರಕ್ಕೆ ಮೃತದೇಹವನ್ನು ರವಾನಿಸಲಾಗಿದೆ.