ಅಕ್ರಮವಾಗಿ ಗಾಂಜಾ ದಾಸ್ತಾನು ಇಟ್ಟುಕೊಂಡಿದ್ದ ಹಿನ್ನೆಲೆ ದಾಳಿ ನಡೆಸಿದ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು 6.43 ಲಕ್ಷ ರೂ. ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

ಕುಂದಾಪುರ ತಾಲೂಕಿನ ಗುಲ್ವಾಡಿ ಉದಯನಗರ ನಿವಾಸಿ ನಜರುಲ್ಲಾ ಖಾನ್(40 ಮತ್ತು ಫಾತಿಮಾ (33)ರನ್ನು ಬಂಧಿಸಲಾಗಿದ್ದು, ಇವರಲ್ಲಿ 8ಕೆಜಿ. 374 ಗ್ರಾಂ ತೂಕದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.