ಮಂಗಳೂರು: ಬರೋಬ್ಬರಿ 10ವರ್ಷಗಳ ಬಳಿಕ ದ.ಕ.ಜಿಲ್ಲಾಡಳಿತ ವತಿಯಿಂದ ನಡೆಸಲಾಗುತ್ತಿರುವ ಬಹು ನಿರೀಕ್ಷಿತ ಪಿಲಿಕುಳ ‘ನೇತ್ರಾವತಿ- ಫಲ್ಗುಣಿ’ ಜೋಡುಕರೆ ಕಂಬಳ ಮುಂದೂಡಿಕೆಯಾಗಿದೆ.

10ವರ್ಷಗಳ ಬಳಿಕ ನ.17 ಮತ್ತು 18ರಂದು ಪಿಲಿಕುಳ ನಿಸರ್ಗಧಾಮದ ಒಳಗಡೆ ನಿರ್ಮಿಸಲಾಗಿರುವ ಜೋಡುಕರೆಯಲ್ಲಿ ಕಂಬಳ ಆಯೋಜಿಸಲು ಸಿದ್ಧತೆ ನಡೆಸಲಾಗಿತ್ತು. ಈ ನಡುವೆ ಪಿಲಿಕುಳ ವ್ಯಾಪ್ತಿಯ ಮೂಡುಶೆಡ್ಡೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸದಸ್ಯ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ. ನ.23ರಂದು ಚುನಾವಣೆ ನಡೆಯಲಿದೆ. ಆದ್ದರಿಂದ ಪಿಲಿಕುಳ ಕಂಬಳ ಆಯೋಜಿಸಿದರೆ ನೀತಿಸಂಹಿತೆಯನ್ವಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ.
ಆದ್ದರಿಂದ ಜಿಲ್ಲಾಡಳಿತ, ಕಂಬಳ ಸಮಿತಿಯವರ ಸಭೆ ನಡೆಸಿ ಕಂಬಳ ಮುಂದೂಡಿದೆ. ಮುಂದಕ್ಕೆ ಜಿಲ್ಲಾಡಳಿತ, ಶಾಸಕರು, ಕಂಬಳ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ಚೃಚೆ ನಡೆಸಿ ಮುಂದಿನ ದಿನಾಂಕವನ್ನು ನಿಗದಿಪಡಿಸಲಿದೆ ಎಂದು ತಿಳಿದು ಬಂದಿದೆ.