ಮಂಗಳೂರು: ಸೈಬರ್ ಖದೀಮರು ವಿವಿಧ ರೀತಿಯಲ್ಲಿ ಜನರನ್ನು ತಮ್ಮ ಬಲೆಗೆ ಕೆಡವಿ ವಂಚಿಸುತ್ತಿರುವುದು ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಸೈಬರ್ ಕಳ್ಳರು ಮಂಗಳೂರು ಪೊಲೀಸ್ ಕಮಿಷನರ್ ಹೆಸರಿನಲ್ಲಿ ಫೇಕ್ ಎಫ್‌ಬಿ ಖಾತೆ ತೆರೆದಿದ್ದಾರೆ.
ಅನುಪಮ್ ಅಗರ್ವಾಲ್ ಐಪಿಎಸ್ ಹೆಸರಿನಲ್ಲಿ ಫೇಕ್ ಐಡಿಯಲ್ಲಿ ಖಾತೆ ತೆರೆಯಲಾಗಿದೆ. ಅವರ ಫೋಟೋವನ್ನೂ ಕೂಡಾ ಅಳವಡಿಸಲಾಗಿದೆ. ಈ ಫೇಕ್ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲಾಗಿದ್ದು, 269 ಮಂದಿ ಫೇಸ್‌ಬುಕ್ ಸ್ನೇಹಿತರೂ ಆಗಿದ್ದಾರೆ. ಇದು ನಕಲಿ ಖಾತೆಯಾಗಿದ್ದು, ಮಂಗಳೂರು ಸೆನ್ ಠಾಣೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದ್ದಾರೆ.