ಕಾಸರಗೋಡು: ಬುರ್ಖಾ ಧರಿಸಿ ಕಾಲೇಜು ಯುವತಿಯರೊಂದಿಗೆ ಓಡಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಯುವಕನೋರ್ವನಿಗೆ ಸಾರ್ವಜನಿಕರೇ ಯದ್ವಾತದ್ವಾ ಗೂಸಾ ನೀಡಿರುವ ಘಟನೆ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ನಸೀಬುಲ್ ಎಂಬ ಮುಸ್ಲಿಂ ಯುವಕ ಕಾಲೇಜು ಯುವತಿಯರೊಂದಿಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ. ಈತ ಯುವತಿಯರೊಂದಿಗೆ ಇರುವಾಗ ಮುಸ್ಲಿಂ ಯುವತಿಯರಂತೆ ಬುರ್ಖಾ ಧರಿಸಿದ್ದ ಓಡಾಡುತ್ತಿದ್ದ. ಮುಖ ಮುಚ್ಚಿರುವ ಬಟ್ಟೆ ಗಾಳಿಗೆ ಹಾರಿದ ಪರಿಣಾಮ ಈತ ಸಾರ್ವಜನಿಕರ ಸಿಕ್ಕಿಬಿದ್ದಿದ್ದಾನೆ. ಈತನಿಗೆ ಸಾರ್ವಜನಿಕರಿಂದ ಧರ್ಮದೇಟು ಬಿದ್ದಿದ್ದು, ಇದರ ವೀಡಿಯೋ ವೈರಲ್ ಆಗಿದೆ. ಬಳಿಕ ಈತನನ್ನು ಕುಂಬಳೆ ಪೋಲೀಸರಿಗೆ ಒಪ್ಪಿಸಲಾಗಿದೆ.