ಉಡುಪಿ: ರಿಷಬ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಚಿತ್ರ ಕಾಂತಾರ ಪ್ರಿಕ್ವೇಲ್ 1ರ ಜ್ಯೂನಿಯರ್ ಆರ್ಟಿಸ್ಟ್‌ಗಳಿಂಗೆ ಪೆಮೇಂಟ್ ನೀಡದೇ ಇರುವ ವಿಚಾರವಾಗಿ ವಿವಾದ ಬುಗಿಲೆದಿದ್ದೆ.
ಈ ಕುರಿತು ವಿಡಿಯೋ ಒಂದು ವೈರಲ್ ಆಗಿದ್ದು, ತಿಂಗಳಿಗೆಂದು ಕೆಲಸಕ್ಕೆಂದು ಕರೆಸಿಕೊಂಡು ಐದು ದಿನಕ್ಕೆ ವಾಪಾಸು ಕಳುಹಿಸುತ್ತಿದ್ದಾರೆ. ಬೆಂಗಳೂರು, ಕೇರಳ, ತಮಿಳುನಾಡಿನಿಂದ ಸಾಕಷ್ಟು ಮಂದಿ ಕಲಾವಿದರು ಬಂದಿದ್ದಾರೆ ಸರಿಯಾಗಿ ಊಟ, ನೀರು ನೀಡುತ್ತಿಲ್ಲ. ವಸತಿ ಸೌಕರ್ಯ ಕೂಡ ನೀಡಿಲ್ಲ. ಪೇಮೆಂಟ್ ಕೂಡ ಕೊಟ್ಟಿಲ್ಲ ಸಾಕಷ್ಟು ಮಂದಿ ಮಹಿಳಾ ಕಲಾವಿದರು ಕೂಡ ಇದ್ದಾರೆ. ಯಾರಿಗೂ ಪೆಮೆಂಟ್ ನೀಡಿಲ್ಲ ಎಂಬ ಆರೋಪ ಮಾಡಿದ್ದಾರೆ.
ಈ ವಿಡಿಯೋಗಳು ಈಗ ವೈರಲ್ ಆಗುತ್ತಿದ್ದು, ಈ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ.