ಕಡಬ: ಅನಾರೋಗ್ಯ ಪೀಡಿತ ಯುವಕ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳೂರು ನಗರದಲ್ಲಿ ಶನಿವಾರ ನಡೆದಿದೆ.
ಕಡಬ ತಾಲೂಕಿನ ಕರ್ಮಾಯಿ ನಿವಾಸಿ ಜೈಸನ್ ಜಾರ್ಜ್ (29) ಮೃತಪಟ್ಟ ಯುವಕ.
ಅನಾರೋಗ್ಯದಿಂದ ಬಳಲುತ್ತಿದ್ದ ಜೈಸನ್ ಜಾರ್ಜ್ನನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಅವರಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಿತ್ತು. ಈ ವೇಳೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮೃತ ಜೈಸನ್ ತಂದೆ, ತಾಯಿ, ಸಹೋದರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.