ಉಡುಪಿ: ಇಲ್ಲಿನ ಕೆಜಿರೋಡ್ ಸಮೀಪ ಗಾಂಜಾ ಮಾರಾಟಕ್ಕೆ ಯತ್ನಿಸಿದ ಮೂವರು ಆರೋಪಗಳನ್ನು ಉಡುಪಿ ಸೆನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬ್ರಹ್ಮಾವರ ತಾಲೂಕು ಕೆಜಿರೋಡ್ ಸಮೀಪ ಗಾಂಜಾ ಮಾರಾಟಕ್ಕೆಂದು ₹8ಲಕ್ಷ ಮೌಲ್ಯದ 10 ಕೆಜಿ ಗಾಂಜಾವನ್ನು ಸಂಗ್ರಹಿಸಿಟ್ಟಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಸೆನ್ ಪೊಲೀಸರು ಆರೋಪಿಗಳಾದ ಸತ್ಯರಾಜ್ ತಂಬಿ, ಕೃಷ್ಣ ಮತ್ತು ಶಕಿಲೇಶ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಉಡುಪಿಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.