ಬಹ್ಮಾವರ: ಇಲ್ಲಿನ ತಾಲೂಕಿನ ಕುಂಜಾಲು ರಾಮಮಂದಿರದ ಸಮೀಪದ ಸರ್ಕಲ್ ನ ಭಗವಧ್ವಜ ಬಳಿ ದುಷ್ಕರ್ಮಿಗಳು ಗೋವಿನ ರುಂಡ ಎಸೆದು ಹೋಗಿದ್ದು ಸಮಸ್ತ ಹಿಂದೂಗಳ ಭಾವನೆಗೆ ದಕ್ಕೆಯಾಗಿದೆ.
ಇದು ಕಳೆದ ಒಂದು ವರ್ಷದಲ್ಲಿ ಬ್ರಹ್ಮಾವರ ಭಾಗದಲ್ಲಿ ನಡೆದ ಎರಡನೇ ಪ್ರಕರಣವಾಗಿದೆ. ಈ ಬಗ್ಗೆ ಸಮಸ್ತ ಹಿಂದೂ ಸಮಾಜ ಹೋರಾಟದ ಹಾದಿ ಹಿಡಿಯ ಬೇಕಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಉಡುಪಿ ಜಿಲ್ಲೆಯಲ್ಲಿ ಗೋ ಕಳ್ಳತನ, ಗೋಸಾಗಾಟ ಪ್ರಕರಣಗಳು ಹೆಚ್ಚುತ್ತಿದ್ದು, ಪೋಲಿಸ್ ಇಲಾಖೆ ಇವೆಲ್ಲವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳು ಯಾರೇ ಆಗಿರಲಿ ಅವರನ್ನು ತಕ್ಷಣ ಬಂಧಿಸಿ ಪ್ರಕರಣ ಸುಖಾಂತ್ಯಗೊಳಿಸಲು ಬಿಜೆಪಿ ಯುವಮೋರ್ಚಾ ಆಗ್ರಹಿಸುತ್ತದೆ ಹಾಗೂ ನ್ಯಾಯ ಸಿಗದಿದ್ದಲ್ಲಿ ಹೋರಾಟದ ಹಾದಿ ಹಿಡಿಯಬೇಕಾದೀತು ಎಂದು ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಅದ್ಯಕ್ಷ ಬಿಲ್ಲಾಡಿ ಪ್ರಥ್ವೀರಾಜ್ ಶೆಟ್ಟಿ ಆಗ್ರಹಿಸಿದ್ದಾರೆ.