ಉಡುಪಿ: ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಜೂ.12ರಂದು ಎಲ್ಲಾ ಅಂಗನವಾಡಿ, ಸರಕಾರಿ ಅನುದಾನಿತ ಶಾಲೆ ಮತ್ತು ಪ್ರೌಡಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಆದೇಶಿಸಿದ್ದಾರೆ.

ಎಲ್ಲಾ ಪದವಿಪೂರ್ವ, ಪದವಿ, ಸ್ನಾತ್ತಕೋತ್ತರ, ಡಿಪ್ಲೋಮಾ, ಎಂಜನಿಯರಿಂಗ್ ಮತ್ತು ಐಟಿಐ ಕಾಲೇಜಿಗಳಲ್ಲಿ ಎಂದಿನಂತೆ ಪಾಠ ಪ್ರವಚನಗಳು ಜರಗಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.