ಉಡುಪಿ: ಭಾರತದ ಪಶ್ಚಿಮ ಕರಾವಳಿಯು ರಾಷ್ಠವಿರೋದಿ ಚಟುವಟಿಕೆಗಳ ತಾಣವಾಗುತ್ತಿದ್ದು ಕೇರಳ ಮತ್ತು ಭಟ್ಕಳದಲ್ಲಿ ಈಗಾಗಲೇ ಭಯೋತ್ಪಾದಕರ ದೊಡ್ಡ ಜಾಲವೇ ಪತ್ತೆಯಾಗಿರುತ್ತದೆ. ಮೊನ್ನೆ ಮಂಗಳೂರಿನ ಹಿಂದೂಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ಹಿಂದೆಯೂ ಅಂತರಾಷ್ಟ್ರೀಯ ದೇಶದ್ರೋಹಿ ಗುಂಪುಗಳ ಸ್ಲೀಪರ್ ಸೆಲ್ ಗಳು ಕಾರ್ಯನಿರ್ವಹಿಸಿದೆ ಎನ್ನುವುದು ಬಹುತೇಕ ಖಚಿತವಾಗಿದೆ. ಕರಾವಳಿಯಲ್ಲಿ ನಡೆಯುವ ಎಲ್ಲಾ ಹಿಂದೂಕಾರ್ಯಕರ್ತರ ಕೊಲೆಗಳ ಸಂಚನ್ನು ದೇಶದ್ರೋಹಿ ಸಂಘಟನೆಗಳು ಕೇರಳದಿಂದಲೇ ಸಂಚು ರೂಪಿಸುತ್ತಿವೆ ಆದ್ದರಿಂದ ಕೇಂದ್ರಸರ್ಕಾರ ಪಶ್ಚಿಮ ಕರಾವಳಿ ಅದರಲ್ಲೂ ಮಂಗಳೂರಿನಲ್ಲಿ ಎನ್ ಐ ಎ ಘಟಕ ಆರಂಭಿಸಲು ಮುಂದಾಗಲಿ ಎಂದು ಹಿಂದೂ ಕಾರ್ಯಕರ್ತರ ಪರವಾಗಿ ಉಡುಪಿ ಜಿಲ್ಲಾ ಯುವಮೋರ್ಚಾ ಅಗ್ರಸುತ್ತದೆ ಎಂದು ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಅಗ್ರಹಿಸಿದ್ದಾರೆ

- May 3, 2025
0
635
Less than a minute
You can share this post!
administrator