ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆ ಮೀನುಗಾರರ ಸಂಘದ ಸಭೆಯಲ್ಲಿ ಜನಪರವಾಗಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಮೇಲೆ ಕಾಂಗ್ರೆಸ್ ಸರಕಾರದ ಅಣತಿಯಂತೆ ಎಫ್ ಐ ಆರ್ ದಾಖಲಿಸಿರುವುದು ಖಂಡನೀಯ ಎಂದು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪ್ರ್ರಥ್ವಿರಾಜ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೂರಾರು ಕೇಸ್ ಹಾಕಿದರೂ ಬಿಜೆಪಿ ಕಾರ್ಯಕರ್ತರು ಹೆದರದೆ ಸದಾ ಜನಪರ ದ್ವನಿ ಎತ್ತುತ್ತೇವೆ. ಎಸ್.ಪಿ ನಡೆಯನ್ನು ಬಿಜೆಪಿ ಯುವಮೋರ್ಚಾ ಇದನ್ನ ಖಂಡಿಸುತ್ತದೆ ಮತ್ತು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ನಿರಂತರವಾಗಿ ಬಿಜೆಪಿನಾಯಕರು, ಕಾರ್ಯಕರ್ತರು ಮತ್ತು ಹಿಂದೂ ಕಾರ್ಯಕರ್ತರು, ನಾಯಕರ ಮೇಲೆ ಕೇಸ್ ದಾಖಲಿಸುತ್ತಾ ಬಂದಿದೆ. ಸರ್ಕಾರದ ಈ ನಡೆ ವಿರುದ್ದ ಯುವಮೋರ್ಚಾ ರಸ್ತೆಗಿಳಿದು ಹೋರಾಟ ಮಾಡಲಿದೆ ಎಂದು ಜಿಲ್ಲಾ ಯುವಮೋರ್ಚಾ ಅದ್ಯಕ್ಷ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಎಚ್ಚರಿಕೆ ನೀಡಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.