ಉಡುಪಿ: ಮಲ್ಪೆಯಲ್ಲಿ ಮೀನುಕದ್ದ ಪ್ರಕರಣದ ಬಗ್ಗೆ ಮಾತನಾಡುವಾಗ ಮೀನುಗಾರ ಮಹಿಳೆಯರ ನೋವು ಮತ್ತು ಕಷ್ಟ ನಷ್ಟಗಳ ಕುರಿತು ಮಾತನಾಡುವುದು ಬಿಟ್ಟು ಮೀನುಗಾರಿಕಾ ಸಮುದಾಯದಿಂದ ತಳಮಟ್ಟದಿಂದ ಬೆಳೆದು ಸದಾ ಮೀನುಗಾರರ ಸಂಕಷ್ಟಕ್ಕೆ ಮೊದಲಾಗಿ ನಿಲ್ಲುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣರ ಕುರಿತು ಅತ್ಯಂತ ಅವಹೇಳನಕಾರಿ ಮತ್ತು ಏಕವಚನ ಪ್ರಯೋಗ ಮಾಡುವ ಮೂಲಕ ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ಕಾಂಚನ್ ಅವರು ತಮ್ಮ ರಾಜಕೀಯ ಅಪ್ರಭುದ್ದತೆಯನ್ನು ಮತ್ತೆ ಪ್ರದರ್ಶಿಸಿದ್ದಾರೆ.
ಗೋಕಳ್ಳತನ ಇರಲಿ, ಮೀನು ಕಳ್ಳತನ ಇರಲಿ ಕಾಂಗ್ರೆಸ್ ಯಾವತ್ತು ಸಂತ್ರಸ್ತರ ಪರ ನಿಲ್ಲದೆ, ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಅದರ ಛಾಳಿಯಾಗಿದೆ. ಪದೇ ಪದೇ ತನ್ನ ರಾಜಕೀಯ ದ್ವೇಷಕ್ಕೋಸ್ಕರ ಉಡುಪಿ ಶಾಸಕರನ್ನು ಅವ್ಯಾಚ್ಯ ಶಬ್ದಗಳಿಂದ ತೇಜೋವದೆಗೆ ಪ್ರಯತ್ನಿಸಿದರೆ ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ತಕ್ಕ ಉತ್ತರ ನೀಡಲಿದೆ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಅದ್ಯಕ್ಷ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಎಚ್ಚರಿಸಿದ್ದಾರೆ