ಸಾಲಿಗ್ರಾಮ: ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ಮೂಲಕ ಪಾರಂಪಳ್ಳಿ ಗಿರಿಜಾ ಶಂಕರನಾರಾಯಣ ಮಧ್ಯಸ್ಥ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾರ್ಕಡ ಗ್ರಾಮದ ಚಂದ್ರಶೇಖರ ಸೋಮಯಾಜಿ ಇವರ ಪತ್ನಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಧನ ಸಹಾಯವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭ ಟ್ರಸ್ಟಿಗಳಾದ ಪಾರಂಪಳ್ಳಿ ಸದಾಶಿವ ಮಧ್ಯಸ್ಥ, ಮಹಾಸಭಾದ ಅಧ್ಯಕ್ಷ ಎಂ. ಶಿವರಾಮ ಉಡುಪ, ಉಪಾಧ್ಯಕ್ಷರಾದ ಪಟ್ಟಾಭಿರಾಮ ಸೋಮಯಾಜಿ, ಸುಬ್ರಾಯ ಉರಾಳ, ಮತ್ತಿತರರು ಉಪಸ್ಥಿತರಿದ್ದರು. ಸಭಾದ ಕಾರ್ಯದರ್ಶಿ ಕೆ. ರಾಜಾರಾಮ ಐತಾಳ ಸ್ವಾಗತಿಸಿ ವಂದಿಸಿದರು.