• August 23, 2025
  • Last Update August 21, 2025 9:01 pm
  • Australia

ಅರ್ಚಕ ರಜನೀಶ್ ಸಾಮಗ ನೆರವಿಗೆ ವಿಶು ಶೆಟ್ಟಿ

ಅರ್ಚಕ ರಜನೀಶ್ ಸಾಮಗ ನೆರವಿಗೆ ವಿಶು ಶೆಟ್ಟಿ

ಉಡುಪಿ: ಪಾರ್ಶ್ವವಾಯು ಪೀಡಿತ ಅರ್ಚಕ ರಜನೀಶ್ ಸಾಮಗರನ್ನು ವಿಶು ಶೆಟ್ಟಿ ಅಂಬಲಪಾಡಿ ಮನವಿ ಮೇರೆಗೆ ಸ್ವರ್ಗ ಆಶ್ರಮಕ್ಕೆ ದಾಖಲಿಸಲಾಯಿತು.

ಜಿಲ್ಲಾಸ್ಪತ್ರೆಯಲ್ಲಿ ಪಾರ್ಶ್ವವಾಯುಪೀಡಿತರಾಗಿ ದಾಖಲಾದ ರಜನೀಶ್ ಸಾಮಗ ಅಸಹಾಯಕರಾಗಿದ್ದು, ಇದನ್ನು ಕಂಡ

ವಿಶು ಶೆಟ್ಟಿ ಅಂಬಲಪಾಡಿ ಉಡುಪಿಯ ಕೊಳಲಗಿರಿಯ ಸ್ವರ್ಗ ಆಶ್ರಮದ ಡಾ| ಶಶಿಕಿರಣ್ ಶೆಟ್ಟಿ ಆಶ್ರಯ ಹಾಗೂ ಚಿಕಿತ್ಸೆಗಾಗಿ ಕೋರಿದ್ದರು. ಇವರ ಮನವಿಗೆ ಸ್ಪಂದಿಸಿದ ಡಾ. ಶಶಿಕಿರಣ್ ಶೆಟ್ಟಿ ಸಾಮಗರನ್ನು ದಾಖಲಿಸಿಕೊಂಡಿದ್ದಾರೆ.

ಅರ್ಚಕ ರಜನೀಶ್ ಸಾಮಗ (42) ಮೂಲತಃ ಉಡುಪಿ ಜಿಲ್ಲೆಯವರಾಗಿದ್ದು, ಮುಂಬೈನ ದಹಿಸರ್‌ನಲ್ಲಿ ಅರ್ಚಕ ಹಾಗೂ ಪುರೋಹಿತ ಕೆಲಸ ಮಾಡಿಕೊಂಡಿದ್ದರು. ಸಾರ್ವಜನಿಕವಾಗಿ ಉತ್ತಮ ಹೆಸರು ಮಾಡಿಕೊಂಡಿದ್ದ ಸಾಮಗ ಅವರು, ಅನಾರೋಗ್ಯದಿಂದ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಅಸಹಾಯಕರಾಗಿದ್ದರು. ಇವರ ಅಸಹಾಯಕತೆಗೆ ಸ್ಪಂದಿಸಿದ

ವಿಶು ಶೆಟ್ಟಿ ಸಾರ್ವಜನಿಕರಲ್ಲಿ ನೆರವಿಗಾಗಿ ವಿನಂತಿಸಿದ್ದರು.

ಇದೀಗ ವಿಶು ಶೆಟ್ಟಿ ಅರ್ಚಕರನ್ನು ಸ್ವರ್ಗ ಆಶ್ರಮಕ್ಕೆ ದಾಖಲಿಸಿದ್ದು, ರಜನೀಶ್ ಸಾಮಗರಿಗೆ ಸಹಾಯ ನೀಡಬಯಸುವವರು ಡಾ. ಶಶಿಕಿರಣ್ ಶೆಟ್ಟಿಯವರ ಮೊಬೈಲ್ ಸಂಖ್ಯೆ 9945130630 ಸಂಪರ್ಕಿಸಬಹುದು.

ಅರ್ಚಕರಿಗೆ ಮದುವೆಯಾಗಿದ್ದು, ಎರಡು ಸಣ್ಣ ಮಕ್ಕಳಿದ್ದಾರೆ. ಇವರ ಅನಾರೋಗ್ಯದ ಬಗ್ಗೆ ತಿಳಿದರೂ ಹೆಂಡತಿ ಸ್ಪಂದಿಸುತ್ತಿಲ್ಲ ಎಂದು ತಿಳಿದುಬಂದಿದೆ.

ಇವರು ತನ್ನ ನಿತ್ಯ ಕರ್ಮಗಳಿಗೆ ಕೂಡಾ ಇನ್ನೊಬ್ಬರ ಸಹಾಯಕ್ಕೆ ಅವಲಂಬಿತರಾಗಿದ್ದಾರೆ.

administrator

Related Articles

error: Content is protected !!