ವರದಿ: ಹರೀಶ್ ಕಿರಣ್ ತುಂಗ, ಸಾಸ್ತಾನ
ಸಾಲಿಗ್ರಾಮ: ಸಾಮರ್ಥ್ಯ, ದೌರ್ಬಲ್ಯ, ಅವಕಾಶ, ವಿಪ್ಪತ್ತುಗಳ ಬಗ್ಗೆ ಪರಾಮರ್ಶೆ ಮಾಡಿದರೆ ಸಾಧನೆ ಖಂಡಿತ ಸಾಧ್ಯ ಎಂದು ಕಮ್ಮಾಜೆ ಯಜ್ಞನಾರಾಯಣ ಹೇರ್ಳೆ ಹೇಳಿದರು.
ಅವರು ಕೂಟ ಮಹಾಅಧಿವೇಶನ ಉದ್ಘಾಟಿಸಿ ಮಾತನಾಡಿ, 2003ರಲ್ಲಿ ಕೆ.ಪಿ ಹೊಳ್ಳರ ನೇತೃತ್ವದಲ್ಲಿ ವಿಶ್ವ ಕೂಟ ಸಮ್ಮೇಳನ ನಡೆಯಿತು. ಆ ಸಂದರ್ಭ ದೇವಸ್ಥಾನದ ಅಭಿವೃದ್ಧಿಗೆ ರೂಪುರೇಷೆ ಹಾಕಲಾಯಿತು. 22 ವರ್ಷಗಳಲ್ಲಿ ದೇವಸ್ಥಾನ ಬೆಳೆದಿದೆ. ದೇವಸ್ಥಾನದ ಜೊತೆ ಸಮಾಜ ಕೂಡ ಬೆಳೆದಿದೆ. ಅಂದು ನಾರಾಯಣ ಸೋಮಯಾಜಿಯವರ ನೇತೃತ್ವದಲ್ಲಿ ಹಾಕಿದ ನೀಲಿ ನಕಾಶೆಯ ಆಧಾರದ ಮೇಲೆ ಕೂಟ ಬಾಂಧವರ ಸಹಕಾರದಲ್ಲಿ ದೇವಸ್ಥಾನವನ್ನು ಕಟ್ಟಲಾಗಿದೆ ಎಂದರು.

ನಮ್ಮ ಬ್ರ್ಯಾಂಡ್ ನಾವೇ ಸೃಷ್ಟಿಸಬೇಕು. ನಾವು ಕೋಟ ಬ್ರಾಹ್ಮಣರು ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಇದರಿಂದ ಕೂಟ ಎನ್ನುವುದು ಬ್ರಾಂಡ್ ಆಗುತ್ತದೆ ಎಂದರು. ಸಮಾಜದಲ್ಲಿರುವ ಬ್ರ್ಯಾಂಡ್ಗಳೆಲ್ಲಾ ಹಳಬರೇ, ಹೊಸ ಪೀಳಿಗೆಯ ಯಾರೂ ಕೂಡ ಇಲ್ಲ. ಡಾ. ಕೆ. ಶಿವರಾಮ ಕಾರಂತ, ಬಿ.ವಿ ಕಾರಂತ್ ಮೊದಲಾದವರೆಲ್ಲರೂ ಹಳಬರೆ. ಹೊಸ ಬ್ರ್ಯಾಂಡ್‌ಗಳು ಸಮಾಜದಲ್ಲಿ ಸೃಷ್ಟಿಸಬೇಕಾಗಿದೆ.
ಕೂಟ ಬಾಂಧವರ ಒಂದು ಸಮೀಕ್ಷೆ ಆಗಬೇಕಾಗಿದೆ. ಇಲ್ಲಿರುವ ಎಂಜಿನಿಯರ್‌ಗಳು, ಡಾಕ್ಟರ್‌ಗಳು, ಉದ್ಯಮಿಗಳು ಎಲ್ಲರನ್ನು ಗುರುತಿಸಬೇಕು. ಕಷ್ಟದಲ್ಲಿರುವ ಸಮಾಜದವರನ್ನು ಗುರುತಿಸಬೇಕು. ಅವರಿಗೆ ಪ್ರತಿ ಅಂಗಸಂಸ್ಥೆಯವರು ದತ್ತುಪಡೆಯುವುದು ಮೊದಲಾದ ಉಪಕ್ರಮಗಳ ಮೂಲಕ ಸಮಾಜಕ್ಕೆ ಸಹಕಾರ ಮಾಡುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಮುಖವಾಗಿ ಬಿಲಿಯನ್ ಫೌಂಡೇಶನ್ ಮುಖಾಂತರ ಕೋಟ್ಯಾಂತರ ರೂಪಾಯಿ ಸಂಗ್ರಹವಾಗುತ್ತಿದೆ. ಪ್ರತಿ ವರ್ಷ ಕನಿಷ್ಠ 50 ಲಕ್ಷ ವಿನಿಯೋಗವಾಗುವಂತೆ ಮಾಡಬೇಕು. ಧನಸಹಾಯ ನೀಡಲಾದ ಕೂಟ ಬ್ರಾಹ್ಮಣ ವಿದ್ಯಾರ್ಥಿಗಳನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆ ಬರಬೇಕು. ಅವರಿಗೆ ಅಗತ್ಯವಿರುವ ಸಹಕಾರ ನೀಡಿ ಮತ್ತೇ ಅವರಿಂದ ಫೌಂಡೇಶನ್‌ಗೆ ಧನಸಹಾಯ ಪಡೆಯಬೇಕು. ಆಗ ಮಾತ್ರ ಫೌಂಡೇಶನ್ ಕಾರ್ಯ ಯಶಸ್ವಿಯಾಗುತ್ತದೆ ಎಂದರು.
ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ, ಕೆ. ಎಸ್ ಕಾರಂತ್ ಮಾತನಾಡಿ, ಕೋಟದವರು ಕೆಲಸ ಮಾಡುವುದರಲ್ಲಿ ನಿಸ್ಸಿಮರು ಆದರೆ ಅದನ್ನು ಪ್ರಚಾರ ಮಾಡುವುದರಲ್ಲಿ ಹಿಂದೆ ಇದ್ದೆವೆ ಎಂದರು. ಈ ಸಮಾವೇಶದ ಮೂಲಕ ಸಂಘಟನೆ ಬಲಗೊಳಿಸುವ ಪ್ರಮುಖ ಪ್ರಯತ್ನವನ್ನು ಚೆನ್ನಾಗಿ ಮಾಡಿದೆ ಎಂದರು.
ಈ ಸಂದರ್ಭ ಸಮಾಜದ ಆಶಾಕಿರಣವಾಗಿರುವ ವೇ. ಮೂ. ಎಚ್. ಸದಾಶಿವ ಐತಾಳ್. ಎ. ಜಗದೀಶ್ ಕಾರಂತ, ರಾಮಕೃಷ್ಣ ಮಯ್ಯ, ಎಚ್. ಸೂರ್ಯನಾರಾಯಣ ಹಂದೆ, ಡಾ.ಪಿ.ಸಿ ಸುಧಾಕರ ಹಂದೆ, ವಿಜಯಲಕ್ಷ್ಮೀ ಆರ್. ಹೊಳ್ಳ, ಕೆ. ಚಂದ್ರಶೇಖರ ಕಾರಂತ ಅವರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಬರಹಗಾರ ಹರಿನರಸಿಂಹ ಕಾರಂತ, ಕರ್ಣಾಟಕ ಬ್ಯಾಂಕ್‌ನ ಪ್ರಧಾನ ಪ್ರಬಂಧಕ ಚಂದ್ರಶೇಖರ ಮಯ್ಯ, ಉದ್ಯಮಿ ರಘುನಾಥ್ ಬಿ ಸೋಮಯಾಜಿ, ಬಿಲಿಯನ್ ಫೌಂಡೇಶನ್ ಅಧ್ಯಕ್ಷ ಇ. ಗೋಪಾಲಕೃಷ್ಣ ಹೇರ್ಳೆ, ಕೂ.ಮ.ಜ ಉಪಾಧ್ಯಕ್ಷ್ಯ ಸಿಎ ಬಿ. ಚಂದ್ರಶೇಖರ ಐತಾಳ್, ಪಿ. ಸದಾಶಿವ ಐತಾಳ, ಕೂ.ಮ.ಜ ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷ್ಯ ಚಂದ್ರಶೇಖರ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.
ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ್ ಹಂದೆ ಪ್ರಾಸ್ತಾವಿಕ ಮಾತನ್ನಾಡಿದರು. ಪ್ರಧಾನ ಕಾರ್ಯದರ್ಶಿ ಸುರೇಶ್ ತುಂಗ ಸ್ವಾಗತಿಸಿದರು, ಶ್ರೀಮತಿ ಮಾಲೀನಿ ರಮೇಶ್ ಮತ್ತು ಕುಮಾರಿ ಶ್ರಾವ್ಯ ಪ್ರಾರ್ಥಿಸಿದರು.

