ಸಾಲಿಗ್ರಾಮ: ಇಲ್ಲಿ ಸೆ.14ರಂದು ಜರಗಲಿರುವ ಮಹಾಅಧಿವೇಶನದ ಪೂರ್ವಭಾವಿಯಾಗಿ ಶನಿವಾರ ತರಕಾರಿ ಕತ್ತರಿಸುವ ಕಾರ್ಯಕ್ರಮ ಗುರುನರಸಿಂಹ ಸಭಾಭವನದ ಅಡುಗೆ ಚಪ್ಪರದಲ್ಲಿ ಜರಗಿತು.

ಹಿಂದೆ ಯಾವುದೇ ಶುಭ ಸಮಾರಂಭದ ವೇಳೆ ಕುಟುಂಬಸ್ಥರು ಮತ್ತು ನೆರೆಹೊರೆಯವರು ಹಿಂದಿನ ದಿನ ರಾತ್ರಿ ತರಕಾರಿ ಹೆಚ್ಚಿ, ಸಹಭೋಜನ ಮಾಡುವ ಪದ್ದತಿ ಇತ್ತು. ಆದರೆ ಇಂದು ಈ ಪದ್ದತಿ ಮರೆಯಾಗಿದೆ. ಅದನ್ನು ಮರುಕಳಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನೂರಾರು ಕೂಟ ಭಾಂದವರು ಸೇರಿ ನಾಳೆಯ ಕಾರ್ಯಕ್ರಮಕ್ಕೆ ಬೇಕಾದ ತರಕಾರಿಗಳನ್ನು ಕತ್ತರಿಸಿ ಬಾಳೆ ಎಳೆ ಸರಿಪಡಿಸಿದರು.



ಈ ನಡುವೆ ಕಾರ್ಯದ ನಡುವೆ ಸಾಂಪ್ರದಾಯಿಕ ಹಾಡುಗಳ ಮೆರುಗು ಸಂಭ್ರಮವನ್ನು ಇಮ್ಮಡಿಗೊಳಿಸಿತು. ನಾಳೆ ನಡೆಯುವ ಅಧಿವೇಶನದಲ್ಲಿ ಸುಮಾರು ನಾಲ್ಜು ಸಾವಿರ ಮಂದಿಗೆ ಭೋಜನ ವ್ಯವಸ್ಥೆ ನಡೆಯಲಿದೆ. ದೇಶಾಧ್ಯಂತ ಇರುವ ಕೂಟ ಭಾಂದವರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.




