• August 23, 2025
  • Last Update August 21, 2025 9:01 pm
  • Australia

ತಮ್ಮದೆ ಪಕ್ಷ ಆಡಳಿತದಲ್ಲಿರುವ ಹಾರಾಡಿ ಗ್ರಾ.ಪಂ ಮಾನ ಹರಾಜು ಹಾಕಿದ ಪ್ರಸಾದ್ ಕಾಂಚನ್: ಪ್ರದೀಪ್ ಹೊನ್ನಾಳ

ತಮ್ಮದೆ ಪಕ್ಷ ಆಡಳಿತದಲ್ಲಿರುವ ಹಾರಾಡಿ ಗ್ರಾ.ಪಂ ಮಾನ ಹರಾಜು ಹಾಕಿದ ಪ್ರಸಾದ್ ಕಾಂಚನ್: ಪ್ರದೀಪ್ ಹೊನ್ನಾಳ

ಬ್ರಹ್ಮಾವರ: ಹಾರಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕಾಂಗ್ರೆಸ್ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಅವರ ಕಾರ್ಯ ವೈಖರಿಯನ್ನು ಟೀಕಿಸುವ ಭರದಲ್ಲಿ ದಶಕಗಳಿಂದ ಕಾಂಗ್ರೆಸ್ ಆಡಳಿತದಲ್ಲಿರುವ ಹಾರಾಡಿ ಗ್ರಾ.ಪಂ ಕಟ್ಟಡ ಸೋರುತ್ತಿದ್ದು ಸ್ವಪಕ್ಷದ ಸ್ಥಳೀಯ ಆಡಳಿತವನ್ನೇ ಟೀಕಿಸಿರುವ ಕಾಂಗ್ರೆಸ್ ಮುಖಂಡ ಪ್ರಸಾದ್ ಕಾಂಚನ್ ಸ್ವಪಕ್ಷಿಯರಿಂದಲೇ ಟೀಕೆಗೆ ಒಳಗಾಗಿದ್ದು ಹಾರಾಡಿ ಗ್ರಾ.ಪಂ ಮರ್ಯಾದೆಯನ್ನು ಹರಾಜು ಹಾಕಿದ್ದಾರೆ

ಜನಮೆಚ್ಚಿದ ಶಾಸಕರ ಕಾರ್ಯವೈಖರಿ ಸಹಿಸಲಾಗದೆ ಹತಾಶರಾಗಿ ಒಬ್ಬ ಜನಪ್ರತಿನಿಧಿಗೆ ಯಾವರೀತಿ ಗೌರವ ನೀಡಬೇಕೆಂಬ ಕನಿಷ್ಠ ರಾಜಕೀಯ ಜ್ಞಾನವು ಪ್ರಸಾದ್ ಕಾಂಚನ್ ಅವರಿಗಿಲ್ಲ ಎಂದು ಮತ್ತೊಮ್ಮೆ ಸಾಬೀತಾಗಿದೆ ಈ ರೀತಿಯ ಹೇಳಿಕೆಗಳನ್ನು ಬುದ್ದಿವಂತರ ಜಿಲ್ಲೆ ಉಡುಪಿಯ ಜನ ಎಂದು ಸಹಿಸಲಾರರು ಕೀಳುಮಟ್ಟದ ಹೇಳಿಕೆ ನೀಡಿದಲ್ಲಿ ತಕ್ಕ ಉತ್ತರ ನೀಡ ಬೇಕಾದೀತು ಎಂದು ಉಡುಪಿ ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಪ್ರದೀಪ್ ಕುಂದರ್ ಹೊನ್ನಾಳ ಆಕ್ರೋಶ ವ್ಯಕ್ತಪಡಿಸಿದರು

administrator

Related Articles

Leave a Reply

Your email address will not be published. Required fields are marked *

error: Content is protected !!