• August 23, 2025
  • Last Update August 21, 2025 9:01 pm
  • Australia

ಉಡುಪಿ ಮೆಸ್ಕಾಂ ; ಕಿರಿಯ ಪವರ್ ಮ್ಯಾನ್ ಗಳ ಸಹನಶಕ್ತಿ ಪರೀಕ್ಷೆ

ಉಡುಪಿ ಮೆಸ್ಕಾಂ ; ಕಿರಿಯ ಪವರ್ ಮ್ಯಾನ್ ಗಳ ಸಹನಶಕ್ತಿ ಪರೀಕ್ಷೆ

ಉಡುಪಿ:ಕಿರಿಯ ಪವರ್ ಮ್ಯಾನ್ ಗಳ ಸಹನಶಕ್ತಿ ಪರೀಕ್ಷೆ ಕರ್ನಾಟಕ ಸರಕಾರದ ಮಂಗಳೂರು ವಿದ್ಯುತ್ ಚ್ಛಕ್ತಿ ಸರಬರಾಜು ಕಂಪನಿ ನಿಯಮಿತ , ಉಡುಪಿ ವಲಯದ ಆಶಯದಲ್ಲಿ ಅಜ್ಜರಕಾಡಿನ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆಯಿತು.

ತರಬೇತಿಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉಡುಪಿ ಮೆಸ್ಕಾಂ ಅಧೀಕ್ಷಕರಾದ ಶ್ರೀ ದಿನೇಶ್ ಉಪಾಧ್ಯಾಯ ದೀಪ ಬೆಳಗಿಸಿ ಚಾಲನೆ ನೀಡಿದರು. ಮೆಸ್ಕಾಂ ಮಂಗಳೂರ್ ತಾಂತ್ರಿಕ ನಿರ್ದೇಶಕರಾದ ಮಹದೇವಸ್ವಾಮಿ ಪ್ರಸನ್ನ , ಮೆಸ್ಕಾಂ ಮಂಗಳೂರಿನ ಆರ್ಥಿಕ ಸಲಹೆಗಾರರಾದ ಮುರುಳೀಧರ್ ನಾಯಕ್ , ಮೆಸ್ಕಾಂ ವಲಯ ನಿಯಂತ್ರಣ ಅಧಿಕಾರಿ ಉಮೇಶ್, ಹಾಗು ಮೆಸ್ಕಾಂ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು. ಮೇ26 ರಿಂದ‌ 29ರ ವರೆಗೆ ನಡೆಯಲಿರುವ ಪರೀಕ್ಷೆಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕಿರಿಯ ಪವರ್ ಮ್ಯಾನ್ ಗಳಿಗೆ ಕಂಬ ಹತ್ತುವಿಕೆ, 100 MTR. , 800 ಮೀಟರ್ ಓಟ , ಗುಂಡು ಎಸೆತ , ಸ್ಕಿಪ್ಪಿಂಗ್,ಹಾಗೂ ವಿವಿಧ ರೀತಿಯ ಸಹನಶಕ್ತಿ ಪರೀಕ್ಷೆ ನಡೆಸಲಾಯಿತು .

13 ಮಹಿಳೆಯರು ಸೇರಿದಂತೆ ಸುಮಾರು 230 ಪವರ್ ಮ್ಯಾನ್ ಭಾಗವಹಿಸಿದ್ದರು.

administrator

Related Articles

Leave a Reply

Your email address will not be published. Required fields are marked *

error: Content is protected !!