• August 22, 2025
  • Last Update August 21, 2025 9:01 pm
  • Australia

ಇಂದು ಸಾಲಿಗ್ರಾಮದಲ್ಲಿ ಲಕ್ಷ ಮೋದಕ ಗಣಯಾಗದ ಪೂರ್ಣಾಹುತಿ

ಇಂದು ಸಾಲಿಗ್ರಾಮದಲ್ಲಿ ಲಕ್ಷ ಮೋದಕ ಗಣಯಾಗದ ಪೂರ್ಣಾಹುತಿ

ಸಾಲಿಗ್ರಾಮ: ಇಲ್ಲಿನ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಅಪರೂಪದ ಲಕ್ಷ ಮೋದಕ ಗಣಯಾಗದ ಪೂರ್ಣಾಹುತಿ ಶನಿವಾರ ನಡೆಯುತ್ತಿದೆ.

ಮಾ.3ರಿಂದ ಆರಂಭಗೊಂಡಿರುವ ಈ ಯಾಗದಲ್ಲಿ ಪ್ರತಿ ನಿತ್ಯ 16 ಮಂದಿ ಋತ್ವಿಜರು 16ಸಾವಿರ ಮೋದಕವನ್ನು ಮಹಾಗಣಪತಿ ಮೂಲಮಂತ್ರವನ್ನು ಪಠಿಸುತ್ತಾ ಯಜ್ಞಕ್ಕೆ ಆಹುತಿ ಸಮರ್ಪಿಸುತ್ತಿದ್ದಾರೆ. ಇಂದುಯಾಗದ ಕೊನೆಯ ದಿನವಾಗಿದ್ದು, 11.30ರ ಸುಮಾರಿಗೆ ಪೂರ್ಣಾಹುತಿ ನಡೆಯಲಿದೆ.

ಲಕ್ಷ ಮೋದಕ ಗಣಯಾಗದ ನೇರಪ್ರಸಾರ ವೀಕ್ಷಿಸಿ.

ನಾಳೆ ಗುರುಧಾಮ ಉದ್ಘಾಟನೆ

ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಭಕ್ತರ ಅನುಕೂಲಕ್ಕಾಗಿ ಗುರುಧಾಮ ವಸತಿಗೃಹವನ್ನು ನಿರ್ಮಾಣ ಮಾಡಲಾಗಿದೆ ಇದರ ಉದ್ಘಾಟನಾ ಸಮಾರಂಭ ಭಾನುವಾರ ಬೆಳಗ್ಗೆ 11.30ಕ್ಕೆ ಜರಗಲಿದೆ. ಆ ಪ್ರಯುಕ್ತ ಶನಿವಾರ ಸಂಜೆ ವಾಸ್ತುಪೂಜೆ, ವಾಸ್ತುಹೋಮ, ರಾಕ್ಷೆಘ್ನ ಹೋಮ,ಸುದರ್ಶನ ಹೋಮ, ದಿಗ್ಬಲಿ ಜರಗಲಿದೆ. ಮಾ.9ರ ಬೆಳಗ್ಗೆ ಬೆಳಿಗ್ಗೆ ಶ್ರೀಗುರುನರಸಿಂಹ ದೇವರ ಸನ್ನಿಧಿಯಲ್ಲಿ ಸಹಸ್ರ ಸಂಖ್ಯಾ ನರಸಿಂಹ ಹೋಮ, ಪಂಚವಿಂಶತಿ ಕಲಶಾಭಿಷೇಕ, ಮಹಾಪೂಜೆ, ಕೂಡ ಜರಗಲಿದೆ. ಗುರುಧಾಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷ್ಯತೆಯನ್ನು ಆಡಳಿತ ಮಂಡಳಿಯ ಮುಖ್ಯಸ್ಥರಾದ ಡಾ. ಕೆ.ಎಸ್‌ ಕಾರಂತ ವಹಿಸಲಿದ್ದಾರೆ. ಹಿರಿಯ ನ್ಯಾಯವಾದಿಗಳಾದ ಉದಯ್‌ ಹೊಳ್ಳ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆನೆಗುಡ್ಡೆ ದೇವಸ್ಥಾನದ ವಿಶ್ರಾಂತ ಧರ್ಮದರ್ಶಿಗಳಾದ ಸೂರ್ಯನಾರಾಯಣ ಉಪಾಧ್ಯಾಯ, ಇಂದ್ರಪ್ರಸ್ಥ ಬೆಂಗಳೂರು ಇದರ ಜಿ. ಪ್ರಕಾಶ್‌ ಮಯ್ಯ. ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಅಧ್ಯಕ್ಷರಾದ ಸುಕನ್ಯಾ ಶೆಟ್ಟಿ. ಕೂಟಮಹಾಜಗತ್ತಿನ ಅಧ್ಯಕ್ಷರಾದ ಎಚ್‌ ಸತೀಶ್‌ ಹಂದೆ ಮೊದಲಾದವರು ಉಪಸ್ಥಿತರಿರಲಿದ್ದಾರೆ. ಈ ಸಂದರ್ಭ ವಸತಿಗೃಹದ ಕಟ್ಟಡಕ್ಕೆ ಕೊಡುಗೆ ನೀಡಿದ ದಾನಿಗಳಿಗೆ ಗೌರವಾರ್ಪಣೆ ನಡೆಯಲಿದೆ.

administrator

Related Articles

Leave a Reply

Your email address will not be published. Required fields are marked *

error: Content is protected !!