ಓಎಸ್‌ಎಸಿ ಎಜ್ಯುಕೇಶನ್ ಸೊಸೈಟಿ ಚುನಾವಣೆ:
ಗೊಂದಲದ ನಡುವೆಯೂ ಸಸೂತ್ರವಾಗಿ ನಡೆದ ಚುನಾವಣೆ
ಬ್ರಹ್ಮಾವರ: ಇಲ್ಲಿನ ಓಎಸ್‌ಎಸಿ ಎಜ್ಯುಕೇಶನ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿಯಾಗಿ ಮೋಸೆಸ್ ರೋಡ್ರಿಗಸ್ ಆಯ್ಕೆಯಾಗಿದ್ದಾರೆ.
ಕಾಲೇಜು ಕಾರ್ಯದರ್ಶಿಯಾಗಿ ಅನಿಲ್ ಬಿ ರೋಡ್ರಿಗಸ್, ಸಿಬಿಎಸ್‌ಸಿ ಕಾರ್ಯದರ್ಶಿಯಾಗಿ ರೊನಾಲ್ಡ್ ಒಲಿವೆರಾ ಆಯ್ಕೆಯಾಗಿದ್ದು, ಸದಸ್ಯರಾಗಿ ಜೆರೋಮ್ ರೋಡ್ರಿಗಸ್, ಕ್ಲೆಮೆಂಟ್ ಡಿ’ಸಿಲ್ವಾ, ಸ್ಟೀವನ್ ರೋಡ್ರಿಗಸ್, ಸ್ಟೀವನ್ ಅಲ್ಮೇಡಾ, ಲವೀನ್ ಲೆವಿಸ್, ಲಿಲ್ಲಿ ಡಿ’ಸೋಜಾ, ರೋಲ್ವಿನ್ ದೇಸಾ, ಜಾಯ್ಸನ್ ಡೇಸಾ, ಲೂಯಿಸ್ ಡಿ’ಸೋಜಾ ಪಾಲ್ ಡಿ ಅಲ್ಮೇಡಾ, ಅನಿಲ್ ಎಂ ಲೋಬೋ, ಮೈಕೆಲ್ ಡಿ ಅಲ್ಮೇಡಾ ಆಯ್ಕೆಯಾಗಿದ್ದಾರೆ.
ಹೈಡ್ರಾಮದ ಬಳಿಕ ನಡೆಯಿತು ಚುನಾವಣೆ
ಮಾರ್ಚ 2 ಬೆಳಗ್ಗೆ 11ಗಂಟೆಗೆ ಓಎಸ್‌ಎಸಿ ಎಜ್ಯುಕೇಶನ್ ಸೊಸೈಟಿಯ ಮಹಾಸಭೆ ಎಂದು ಕಾರ್ಯದರ್ಶಿ ಸೊಸೈಟಿಯ 400ಕ್ಕೂ ಅಧಿಕ ಮಂದಿಗೆ ನೋಟಿಸ್ ನೀಡಿದ್ದರು, ಆದರೆ ಏಕಾಏಕಿ ಶನಿವಾರ ಸಂಜೆ ವೇಳೆಗೆ ಪದಾಧಿಕಾರಿಗಳ ಸಭೆಯನ್ನು ಕರೆದು ಮಹಾಸಭೆಯನ್ನು ರದ್ದುಗೊಳಿಸಿ, ಸೂಚನಾ ಪತ್ರವನ್ನು ವಾಟ್ಸ್‌ಪ್ ಗ್ರೂಪ್ ಒಂದಕ್ಕೆ ಹಾಕಿದ್ದರು.

ಭಾನುವಾರ ಬೆಳಗ್ಗೆ ಮಹಾಸಭೆಯ ಬಂದ ಸೊಸೈಟಿಯ ಸದಸ್ಯರು, ಸಭೆ ರದ್ದುಗೊಂಡಿರುವುದಕ್ಕೆ ಆಕ್ರೋಶಗೊಂಡರು. ಈ ಸಭೆಗಾಗಿ ಹಲವಾರು ಮಂದಿ ದುಬೈ, ಬೆಂಗಳೂರು, ಮುಂಬೈಯಿನಿಂದ ಬಂದಿದ್ದಾರೆ. ಆದರೆ ಏಕಾಏಕಿ ಒಂದು ವಾರಗಳ ಮೊದಲು ಪೂರ್ವಸೂಚನೆ ನೀಡದೆ ರದ್ದುಗೊಳಿಸಿರುವುದು, ಕಾನೂನಾತ್ಮಕವಾಗಿ ತಪ್ಪು ಎಂದು ಸದಸ್ಯರು ಆಕ್ರೋಶವ್ಯಕ್ತಪಡಿಸಿದರು. ಈ ಕುರಿತು ಸೊಸೈಟಿಯ ಅಧ್ಯಕ್ಷರಾದ ರೆ.ಫಾ. ಎಂಸಿ ಮಥಾಯ್ ಅವರನ್ನು ಭೇಟಿಯಾಗಿ, ಆಗಿರುವ ಗೊಂದಲದ ಬಗ್ಗೆ ಸದಸ್ಯರು ಪ್ರಶ್ನಿಸಿದರು. ಈ ಹಿಂದೆ ಅಮಾನತು ಮಾಡಲಾದ 7 ಮಂದಿ ಸದಸ್ಯರಿಗೆ ಪುನಃ ಸಭೆಯಲ್ಲಿ ಭಾಗವಹಿಸಲು ಮಧ್ಯಂತರ ಆದೇಶವನ್ನು ಜಿಲ್ಲಾ ನೋಂದಣಾಧಿಕಾರಿಗಳು ನೀಡಿದ ಹಿನ್ನೆಲೆ, ಅವರ ಕಾನೂನು ಸಲಹೆಗಾರರು ಸಭೆಯನ್ನು ಮುಂದೂಡುವಂತೆ ಸೂಚಿಸಿದ್ದರು. ಈ ಹಿನ್ನೆಲೆ ಅವರು ಸಭೆಯನ್ನು ಮುಂದೂಡಿದ್ದಾರೆ. ಅವರ ನಿರ್ಧಾರವನ್ನು ನಾನು ಸಭೆಯಲ್ಲಿ ವಿರೋಧಿಸಿದ್ದೇ, ಕೋರಂ ಅವರ ಕಡೆ ಇರುವ ಹಿನ್ನೆಲೆ ಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.

ಈ ಕುರಿತು ಹಲವು ಗಂಟೆಗಳ ಕಾಲ ಚರ್ಚೆ ನಡೆದು ಅಧ್ಯಕ್ಷರಲ್ಲಿ ಸಭೆ ನಡೆಸುವಂತೆ ಕೋರಿದರು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿಗಳು ಮಹಾಸಭೆಗೆ ನೋಟಿಸು ನೀಡಿರುವುದು, ಈ ಹಿನ್ನೆಲೆ ನಾನು ಸಭೆಯನ್ನು ನಡೆಸಲು ಸಾಧ್ಯವಿಲ್ಲ ಎಂದು ಉತ್ತರ ನೀಡಿದರು. ಇದರಿಂದ ಆಕ್ರೋಶಿತರಾದ ಸದಸ್ಯರು, ಕಾರ್ಯದರ್ಶಿಯವರಿಗೆ ಕರೆ ಮಾಡುವಂತೆ ಆಗ್ರಹಿಸಿದರು. ಈ ಸಂದರ್ಭ ಅಧ್ಯಕ್ಷರ ದೂರವಾಣಿ ಕರೆಗೆ ಸರಿಯಾಗಿ ಸ್ಪಂದಿಸದ ಹಿನ್ನೆಲೆ ಆಕ್ರೋಶಗೊಂಡ ಸದಸ್ಯರು, ಅಧ್ಯಕ್ಷರ ನಿವಾಸದ ಎದುರು ಮಹಾಸಭೆಯನ್ನು ನಡೆಸುವ ತೀರ್ಮಾನಕ್ಕೆ ಬಂದರು. ಇಬ್ಬರು ಹಿರಿಯ ಸದಸ್ಯರನ್ನು ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನಾಗಿ ನೇಮಿಸಿ, ಅವರ ಮೂಲಕ ಚುನಾವಣೆ ನಡೆಸಿಕೊಡುವಂತೆ ನೋಂದಣಾ ಇಲಾಖೆಯ ಗಮನಕ್ಕೆ ತರಲಾಯಿತು. ಆ ಪ್ರಕಾರ ಚುನಾವಣಾಧಿಕಾರಿಯಾಗಿ ದೈಹಿಕ ಶಿಕ್ಷಣ ಶಿಕ್ಷಕರಾದ ವಿಜಯಕುಮಾರ್ ಶೆಟ್ಟಿ ಚುನಾವಣಾ ಪ್ರಕ್ರಿಯೆ ನಡೆಸಿದರು.

ಈ ಚುನಾವಣೆಯಲ್ಲಿ ಮೇಲೆ ತಿಳಿಸಿದ ಅಭ್ಯರ್ಥಿಗಳು ವಿಜಯೀಯಾಗಿ ಹೊರಬಂದು, ಓಎಸ್‌ಎಸಿ ಎಜ್ಯುಕೇಶನ್ ಸೊಸೈಟಿಯ ಚುಕ್ಕಾಣಿ ಹಿಡಿದ್ದಾರೆ.

