ಬ್ರಹ್ಮಾವರ: ಕಾಂಬೋಡಿಯಾದಲ್ಲಿ ನಡೆಯುತ್ತಿರುವ ಮಿಸ್ ಗ್ಲೋಬಲ್ ಇಂಟರ್ನ್ಯಾಶನಲ್ಸ್ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಿ ಬಾರ್ಕೂರು ಸಂಜಾತೆ ಸ್ವೀಝಲ್ ಪುಟಾರ್ಡೋ ಪಾದಾರ್ಪಣೆ ಮಾಡಿದ್ದಾರೆ.

ಸೋಮವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಿ ಮಾತನಾಡಿದ ಸ್ವೀಝಲ್, ನನ್ನ ತಾಯಿ ನನಗೆ ಕಲಿಸಿದ್ದು, ಸಮಾಜದಿಂದ ಪಡೆದಿದ್ದ ನ್ನ ಸಮಾಜಕ್ಕೆ ವಾಪಾಸು ನೀಡಬೇಕು. ನಾನು ವೈಯುಕ್ತಿಕವಾಗಿ ಮಕ್ಕಳ ಜೊತೆ ಹೆಚ್ಚು ಕಾಲ ಕಳೆಯಬಯಸುತ್ತೇನೆ.

ನಾನು ಹೆಣ್ಣುಮಕ್ಕಳು, ವಿಶೇಷ ಕಾಳಜಿಯ ಅವಶ್ಯಕತೆ ಇರುವ ಮಕ್ಕಳ ಬಗ್ಗೆ ಕೆಲಸ ಮಾಡಲು ಇಚ್ಚಿಸುತ್ತೇನೆ ಏಕೆಂದರೆ ಅವರು ನಮ್ಮ ದೇಶದ ಮತ್ತು ಪ್ರಪಂಚದ ಭವಿಷ್ಯವಾಗಿದ್ದಾರೆ. ಅವರನ್ನು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ಮಾರ್ಚ 9ರಂದು ಸ್ಪರ್ಧೆಯ ಫೈನಲ್ ನಡೆಯಲಿದ್ದು, ಸ್ವೀಝಲ್ ಗೆ ಮಿಸ್ ಗ್ಲೋಬಲ್ ಕಿರಿಟ ಮುಡಿಗೇರಲಿ ಎನ್ನುವುದು ನಮ್ಮ ಹಾರೈಕೆ