• November 23, 2025
  • Last Update November 14, 2025 3:04 pm
  • Australia

ನಿಯಮ ಉಲ್ಲಂಘಿಸಿದ ಕಾಂಗ್ರೆಸ್ ಮೇಲೆ ಕ್ರಮಕೈಗೊಳ್ಳದಿದ್ದರೆ ಠಾಣೆಗೆ ಮುತ್ತಿಗೆ

ನಿಯಮ ಉಲ್ಲಂಘಿಸಿದ ಕಾಂಗ್ರೆಸ್ ಮೇಲೆ ಕ್ರಮಕೈಗೊಳ್ಳದಿದ್ದರೆ ಠಾಣೆಗೆ ಮುತ್ತಿಗೆ

ಉಡುಪಿ: ಕಾಂಗ್ರೆಸ್ ಪ್ರತಿಭಟನೆಯಲ್ಲಿ ನಿಯಮ ಉಲ್ಲಂಘಿಸಿದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ದ ಕ್ರಮಕೈಗೊಳ್ಳದಿದ್ದರೆ ಬಿಜೆಪಿ ಯುವಮೋರ್ಚಾ ನೇತೃತ್ವದಲ್ಲಿ ಮಣಿಪಾಲ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಎಚ್ಚರಿಕೆ ನೀಡಿದ್ದಾರೆ‌

ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬಗೊಂಡಿದ್ದ ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಸಂಸದ ಶ್ರೀನಿವಾಸ ಪೂಜಾರಿ ಯವರ ವಿಶೇಷ ಮುತುವರ್ಜಿಯಿಂದ ಆರಂಭವಾಗುವ ಮುನ್ಸೂಚನೆಯನ್ನು ತಿಳಿದ ಕಾಂಗ್ರೆಸ್ ನಿನ್ನೆ ಉಡುಪಿ ಯಲ್ಲಿ ಪ್ರತಿಭಟನೆಯ ನಾಟಕವಾಡಿ ಜನರನ್ನು ಎಪ್ರಿಲ್ ಫೂಲ್ ಮಾಡಿದೆ.

ಪ್ರತಿಭಟನೆಯ ಸಂದರ್ಭದಲ್ಲಿ 10 ನಿಮಿಷಕ್ಕೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ 169A ಯನ್ನು ತಡೆ ಮಾಡಿದ್ದು ಹಾಗೆಯೇ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಆಸ್ತಿಯಾದ ಇಂದ್ರಾಳಿ ಸೇತುವೆಯ ಮೇಲೆ ತನ್ನ ಕಾರ್ಯಕರ್ತರ ಮೂಲಕ ಬಿಜೆಪಿ ಪಕ್ಷವನ್ನು ಅವಹೇಳನ ಮಾಡುವ ಪೈಂಟಿಂಗ್ ಮಾಡಿದ್ದಾರೆ. ಈ ವೀಡಿಯೋ ಧಾಖಲೆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸುಮೊಟೊ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಇಲ್ಲವಾದಲ್ಲಿ ನಾಳೆ ಯುವಮೋರ್ಚಾ ನೇತೃತ್ವದಲ್ಲಿ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಪೋಲಿಸ್ ಇಲಾಖೆ ಈ ವಿಚಾರವಾಗಿ ತಪ್ಪಿತ್ತಸ್ಥರ ವಿರುದ್ಧ ಕ್ರಮಕೈಗೊಳ್ಳದಿದ್ದಲ್ಲಿ ಉಡುಪಿ ಜಿಲ್ಲಾ ಯುವಮೋರ್ಚಾ ನೇತ್ರತ್ವದಲ್ಲಿ ಮಣಿಪಾಲ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಅದ್ಯಕ್ಷ ಪ್ರಥ್ವೀರಾಜ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *

error: Content is protected !!