ಬ್ರಹ್ಮಾವರ: ಹಿಂದೆ ನಾವೇ ಉತ್ತು ಬಿತ್ತು, ಕೃಷಿ ಮಾಡುತ್ತಿದ್ದೇವು. ಇಂದು ತಂತ್ರಜ್ಞಾನ ಮತ್ತು ಬಿಹಾರಿ ಕಾರ್ಮಿಕರ ನಂಬಿ ಕೃಷಿ ಮಾಡುತ್ತಿದ್ದೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಖೇದ ವ್ಯಕ್ತಪಡಿಸಿದರು.
ಅವರು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದದಲ್ಲಿ ನಡೆದ ಕಿಸಾನ್ ಸಮ್ಮಾನ 19ನೇ ಕಂತು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ನಮ್ಮವರು ಕೃಷಿಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಕರಾವಳಿಯಲ್ಲಿ ಕೃಷಿ ಉಳಿಯಲು ಸಾಧ್ಯ ಎಂದರು.

ಕೃಷಿ ನಷ್ಟವಾದಾಗ, ಸಾಲಮನ್ನಾ ಮಾಡಿದರೆ ರೈತರಿಗೆ ಅನುಕೂಲವಾಗುವುದಿಲ್ಲ. ಬದಲಾಗಿ ರೈತರಿಗೆ ಬೆಂಬಲ ನೀಡಿದರೆ ಮಾತ್ರ ರೈತ ಮೇಲೆ ಬರಲು ಸಾಧ್ಯ ಎಂದು ಪ್ರಧಾನಿ ಮೋದಿ ಕಂಡುಕೊಂಡ ಹಿನ್ನೆಲೆ ಈ ಯೋಜನೆ ಪ್ರಾರಂಭವಾಗಿದೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು 1.53 ಲಕ್ಷ ರೈತರಿಗೆ 490 ಕೋಟಿ ಹಣ ಬಿಡುಗಡೆಯಾಗಿದೆ. ಈ ಬಾರಿ 1,28,985 ಮಂದಿ ಫಲಾನುಭವಿಗಳಿಗೆ 25.8ಕೋ ರೂಪಾಯಿ ಹಣ ಬಿಡುಗಡೆಯಾಗಿದೆ.
ಕೃಷಿಕನೊಬ್ಬ ಕೃಷಿಯನ್ನು ಸ್ವಾವಲಂಬಿಯಾಗಿ ನಡೆಸಲು ಕಿಸಾನ್ ಸಮ್ಮಾನ್ ಯೋಜನೆ ಸಹಾಯಕವಾಗಿದೆ ಎಂದರು.
ಈ ಸಂದರ್ಭ ಕೆವಿಕೆ ವ್ಯಾಪ್ತಿಯ ಸಾಧಕ ಕೃಷಿಕರಿಗೆ ಸನ್ಮಾನಿಸಲಾಯಿತು. ಮತ್ತು ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಲಾಯಿತು.
ಈ ಸಂದರ್ಭ ಫಲಾನುಭವಿಗಳ ಜೊತೆ ಸಂಸದರು ಕುಂದು ಕೊರತೆಗಳ ಬಗ್ಗೆ ಚರ್ಚಿಸಿದರು.
ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ, ಬ್ರಹ್ಮಾವರದ ವಲಯ ಸಂಶೋಧನಾ ಕೇಂದ್ರದ ನಿರ್ದೇಶಕ ಸುಧೀರ್ ಕಾಮತ್, ಕೃಷಿ ಡಿಪ್ಲೋಮಾ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮಣ ಮೊದಲಾದವರು ಇದ್ದರು.
ಕೆವಿಕೆ ಬ್ರಹ್ಮಾವರದ ನಿರ್ದೇಶಕ ಧನಂಜಯ ಬಿ. ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಜ್ಞಾನಿ ನವೀನ್ ಎನ್ ಈ ಕಾರ್ಯಕ್ರಮ ನಿರೂಪಿಸಿದರು.